»   » ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ರಮ್ಯಾಗೆಲ್ಲಿದೆ ಪುರಸೊತ್ತು?

ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ರಮ್ಯಾಗೆಲ್ಲಿದೆ ಪುರಸೊತ್ತು?

Subscribe to Filmibeat Kannada

ರಮ್ಯಾಆತ್ಮಹತ್ಯೆಗೆ ಪ್ರಯತ್ನಿಸಿದರು ಎಂಬ ಸುದ್ದಿ ವಾರವಿಡೀ ಸ್ಯಾಂಡಲ್‌ವುಡ್‌ನಲ್ಲಿ ಸುತ್ತಾಡಿ, ಈಗ ಅದೆಲ್ಲವೂ ಸುಳ್ಳೆಂದು ಖಚಿತವಾಗಿದೆ. ನಿಜ ಹೇಳಬೇಕು ಅಂದ್ರೆ; ರಮ್ಯಾಗೆ ಸಾಯುವುದಕ್ಕೂ ಕೂಡ ಪುರಸೊತ್ತಿಲ್ಲ! ಆಷ್ಟೊಂದು ಚಿತ್ರಗಳು ರಮ್ಯಾ ಮುಂದಿವೆ.

ರವಿಚಂದ್ರನ್‌, ಶಿವರಾಜ್‌ ಕುಮಾರ್‌ ಸೇರಿದಂತೆ ಅನೇಕ ನಟರ ಜೊತೆ ನಟಿಸಲು ಅವರಿಗೆ ಆಹ್ವಾನಗಳು ಬರುತ್ತಿವೆ. ತೆಲುಗಿನ ‘ ಅಮೃತವರ್ಷಂ’ ಚಿತ್ರ ಕ್ಲಿಕ್‌ ಆಗಿದೆ. ಈ ಮಧ್ಯೆ ತಮಿಳಿನಲ್ಲೂ ಆಫರ್‌ಗಳು ಬರುತ್ತಿವೆ.

ಪ್ರಸ್ತುತ ತಮಿಳು ಚಿತ್ರವೊಂದರ ಚಿತ್ರೀಕರಣದ ಹಿನ್ನೆಲೆ ಲಂಡನ್‌ನಲ್ಲಿದ್ದಾರೆ. ಇನ್ನೂ ಎರಡೂ ತಿಂಗಳ ಕಾಲ ಅವರು ಅಲ್ಲಿಯೇ ಇರುತ್ತಾರೆ. ‘ತನನಂ ತನನಂ’ ಚಿತ್ರದ ಶ್ಯಾಮ್‌, ಈ ತಮಿಳು ಚಿತ್ರದ ನಾಯಕ.

ಈ ಹಿಂದೆ ತಮಿಳಿನಲ್ಲಿ ‘ಕುಟ್ಟು’ ಮತ್ತು ‘ಗಿರಿ‘ ಚಿತ್ರಗಳಲ್ಲಿ ರಮ್ಯಾ ನಡಿಸಿದ್ದರು. ಕಾಲಿವುಡ್‌ ಪ್ರೇಕ್ಷಕರಿಗೆ ರಮ್ಯಾ ಅಂದ್ರೆ ಸಕತ್ತು ಇಷ್ಟವಂತೆ. ಹೀಗಾಗಿಯೇ ತಮಿಳಿನತ್ತ ರಮ್ಯಾ ಹೆಜ್ಜೆ ಹಾಕುತ್ತಿದ್ದಾರೆ!

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada