»   » ಪ್ರೀತಿ ಹುಡುಕುತ್ತಿರುವ ಪ್ರೇಮ್ ಗೆ ಐದೇ ಐದು ಪ್ರಶ್ನೆಗಳು!

ಪ್ರೀತಿ ಹುಡುಕುತ್ತಿರುವ ಪ್ರೇಮ್ ಗೆ ಐದೇ ಐದು ಪ್ರಶ್ನೆಗಳು!

Posted By: Super
Subscribe to Filmibeat Kannada

ನಾನು ರಕ್ಷಿತಾಳನ್ನು ಚೆನ್ನಾಗಿ ನೋಡಿಕೊಂಡರೆ, ಆಕೆ ಈ ಪ್ರೇಮ್ ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ!..

1. ಪ್ರೀತಿ ಏಕೆ ಭೂಮಿ ಮೇಲಿದೆ?

ದೇವರಾಣೆಗೂ ಗೊತ್ತಿಲ್ಲ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನವೇ ಪ್ರೀತಿ ಏಕೆ ಭೂಮಿ ಮೇಲಿದೆ?. ಈ ಚಿತ್ರದಲ್ಲಿ ನನಗೆ ತಿಳಿದಿರುವ ಉತ್ತರವನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಜತೆಗೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಹಿಡಿದು ಬಾಲಗಂಗಾಧರನಾಥ ಸ್ವಾಮೀಜಿವರೆಗೆ ಎಲ್ಲರೂ ಪ್ರೀತಿ ಏಕೆ ಭೂಮಿ ಮೇಲಿದೆ?ಅಂತ ತಮ್ಮ ಅನಿಸಿಕೆಗಳನ್ನು ಚಿತ್ರದಲ್ಲಿ ಹಂಚಿಕೊಂಡಿದ್ದಾರೆ.

2. ಪ್ರೀತಿತಡವಾಗ್ತಿರೋದು ಯಾಕೆ? ಬಿಡುಗಡೆ ಯಾವಾಗ?

ಚಿತ್ರಕ್ಕಾಗಿ ಎಲ್ಲವನ್ನು ಕೊಟ್ಟಿದ್ದೇನೆ. ಹಗಲು ರಾತ್ರಿ ದುಡಿದಿದ್ದೇನೆ. ಚಿತ್ರ ಇದೀಗ ಪೂರ್ಣಗೊಂಡಿದೆ. ಆದರೆ, ಸುಮಾರು 90ಸಾವಿರ ಅಡಿ ಫಿಲಂ ಶೂಟ್ ಮಾಡಿದ್ದೇನೆ. ಇದನ್ನು ಈಗ 15ಸಾವಿರ ಅಡಿಗೆ ಎಡಿಟ್ ಮಾಡಿದರೆ ಅಲ್ಲಿಗೆ ಪ್ರೀತಿ ಖತಂ. ಒಟ್ಟಿನಲ್ಲಿ ಕ್ವಾಲಿಟಿ ದೃಷ್ಟಿಯಿಂದ ಚಿತ್ರ ಕೊಂಚ ತಡ ಆಗಿದೆ ಅಷ್ಟೇ. ಅಕ್ಟೋಬರ್ 26ಕ್ಕೆ ರಿಲೀಸ್ ಮಾಡಲು ಯೋಚಿಸಿದ್ದೇನೆ.

3. ಪ್ರೀತಿಯನ್ನು ಜನ ಯಾಕೆ ನೋಡ್ಬೇಕು?

ಪ್ರೀತಿ, ಪ್ರೇಮ, ಪ್ರಣಯ ನಮ್ಮ ಚಿತ್ರದ ಹೈಲೈಟ್. ಚಿತ್ರದಲ್ಲಿ ಎಲ್ಲವೂ ಡಿಫರೆಂಟಾಗಿದೆ. ಲೊಕೇಷನ್, ಹಾಡು, ನೃತ್ಯ, ಸಂಗೀತ.. ಎಲ್ಲವೂ ಹೊಸತನದಿಂದ ಕೂಡಿದೆ. ಜತೆಗೆ ಅಂಬರೀಷ್, ರಕ್ಷಿತಾ, ಮುತ್ತಪ್ಪ ರೈ, ಮಲ್ಲಿಕಾ ಶೆರಾವತ್, ಸುಭಾಷ್ ಭರಣಿ ಹೀಗೆ ಹಲವಾರು ಗಣ್ಯರು, ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ.

4. ಹೌದು, ರಕ್ಷಿತಾ ಹೇಗಿದ್ದಾರೆ?

ಧರ್ಮೋ ರಕ್ಷತಿ ರಕ್ಷಿತಃ ನನ್ನ ಪ್ರಕಾರ ಹೀಗಂದ್ರೆ; ನಾನು ರಕ್ಷಿತಾಳನ್ನು ಚೆನ್ನಾಗಿ ನೋಡಿಕೊಂಡರೆ, ಆಕೆ ಈ ಪ್ರೇಮ್ ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ!

5. ಮುಂದಿನ ಯೋಜನೆ?

ಮೂರು ಭಾಷೆಗಳಲ್ಲಿ ಚಿತ್ರವೊಂದನ್ನು ನಿರ್ಮಿಸಲು ಸಜ್ಜಾಗಿದ್ದೇನೆ. ನಿಮಗೆ ಮತ್ತೊಂದು ಶುಭ ಸುದ್ದಿ. ಏನಪ್ಪಾ ಅಂದ್ರೆ; ಈ ಚಿತ್ರದಲ್ಲಿ ನಾನು ನಿರ್ದೇಶಕನಾಗಿ ಮಾತ್ರ ಕೆಲಸ ಮಾಡುತ್ತೇನೆ!
ಪ್ರೀತಿ ಏಕೆ ಭೂಮಿ ಮೇಲಿದೆ?ಚಿತ್ರದ ಗ್ಯಾಲರಿ

English summary
An interview with Noted Director and Actor Prem by Vinay.N.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada