ಜಯಗೋಪಾಲ್‌ಗೆ 70, ಎರಡು ವಿಭಿನ್ನ ಅಭಿನಂದನೆಗಳು
ಬೆಂಗಳೂರು : ಚಿತ್ರ ಸಾಹಿತಿ, ಗೀತ ರಚನಾಕಾರ ಮತ್ತು ಸಂಗೀತ ನಿರ್ದೇಶಕ ಆರ್.ಎನ್. ಜಯಗೋಪಾಲ್ ಅವರ 70ನೇ ಹುಟ್ಟು ಹಬ್ಬದ ಪ್ರಯುಕ್ತ , ಅ.8 ಮತ್ತು 9ರಂದು ಅಭಿನಂದನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ನಗರದ ಸುರಾನ ಕಾಲೇಜು ಹಾಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಆರ್.ಎನ್.ಜಯಗೋಪಾಲ್ ಅವರ ‘ಆತ್ಮಕಥೆ’ ಪುಸ್ತಕ ರೂಪದಲ್ಲಿ ಹೊರಬರಲಿದೆ.
ಅ.8ರಂದು ಸುರಾನ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭವನ್ನು ಹಿರಿಯ ನಟಿ ಸರೋಜಾ ದೇವಿ ಉದ್ಘಾಟಿಸಲಿದ್ದಾರೆ. ಸಭಾಪತಿ ವಿ.ಆರ್. ಸುದರ್ಶನ್ ಅಧ್ಯಕ್ಷತೆವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುಸ್ತಕ, ಸಿ.ಡಿ ಬಿಡುಗಡೆ, ವಿಚಾರ ಸಂಕಿರಣ, ಸಂಗೀತ ಮತ್ತಿತರ ಕಾರ್ಯಕ್ರಮಗಳು ಜರುಗಲಿವೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಅ.9ರಂದು ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಗಾಯಕ ಡಾ.ಪಿ.ಬಿ. ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲಾ, ವಾಣಿ ಜಯರಾಂ, ಎಲ್.ಆರ್.ಈಶ್ವರಿ ಅವರಿಂದ ಸಂಗೀತಧಾರೆ ಹರಿದು ಬರಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications