»   » ಏಡ್ಸ್‌ಗೆ ತಕ್ಕ ಉತ್ತರ ಹೇಳಲೇ ಬೇಕಾಗಿದೆ -ಶಿಲ್ಪಾ ಶೆಟ್ಟಿ

ಏಡ್ಸ್‌ಗೆ ತಕ್ಕ ಉತ್ತರ ಹೇಳಲೇ ಬೇಕಾಗಿದೆ -ಶಿಲ್ಪಾ ಶೆಟ್ಟಿ

Subscribe to Filmibeat Kannada

ಉಡುಪಿ : ಬಿಬಿಸಿ ವರ್ಲ್ಡ್‌ ಸರ್ವೀಸ್‌ ಟ್ರಸ್ಟ್‌ ನ ಎಚ್‌ಐವಿ/ಏಡ್ಸ್‌ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಹಿಂದಿ ಚಲನಚಿತ್ರ ನಟಿ ಶಿಲ್ಪಾ ಶೆಟ್ಟಿ ಚಾಲನೆ ನೀಡಿದ್ದಾರೆ.

ಕಲ್ಯಾಣಪುರದ ಮಿಲಾಗ್ರಿಸ್‌ ಕಾಲೇಜಿನ ತ್ರಿಶತಮಾನೋತ್ಸವ ಸಭಾಂಗಣದಲ್ಲಿ ನಡೆದ ‘ಹಾತ್‌ ಸೆ ಹಾತ್‌ ಮಿಲಾವೋ’ ಎಂಬ ಹಿಂದಿ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕೆ ಶಿಲ್ಪಾಶೆಟ್ಟಿ ಆಗಮಿಸಿದ್ದರು. ಬಿಬಿಸಿ ವರ್ಲ್ಡ್‌ ಸರ್ವೀಸ್‌ ಟ್ರಸ್ಟ್‌ ಸಂಸ್ಥೆಯು ದೂರದರ್ಶನ ಮತ್ತು ನ್ಯಾಕೋ ಸಹಯೋಗದಲ್ಲಿ ಎಚ್‌ಐವಿ ಬಾಧಿತಳ ಜೀವನ ಚರಿತ್ರೆಗೆ ಸಾಕ್ಷ್ಯಚಿತ್ರದ ರೂಪ ನೀಡುತ್ತಿದೆ.

ಈ ಸರಣಿ ದೂರದರ್ಶನದಲ್ಲಿ ಪ್ರಸಾರವಾಗಲಿದ್ದು, ಮಾರಕ ರೋಗ ಏಡ್ಸ್‌ ಬಗ್ಗೆ ಮಾಹಿತಿ ನೀಡಲಿದೆ. ಕಾಲೇಜಿನಲ್ಲಿ ಶಿಲ್ಪಾಶೆಟ್ಟಿ ಅವರೊಂದಿಗೆ ಸಂವಾದ ನಡೆಸುವ ದೃಶ್ಯವನ್ನು ಚಿತ್ರೀಕರಿಸಲಾಯಿತು.

ಖ್ಯಾತ ನಟಿ ಸುಗಂಧಿ, ಕಾಲೇಜಿನ ಪ್ರಾಂಶುಪಾಲ ಫ್ರೆಡ್‌ ಮಸ್ಕರೇನಸ್‌, ಮಾರ್ಟಿನ್‌ ಸಲ್ದಾನ, ಸದಾಶಿವ ಅಲ್ಸೆ, ವಿನ್ಸೆಂಟ್‌ ಆಳ್ವ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada