»   » ಕನ್ನಡ ‘ಇಷ್ಕ್‌’ನಲ್ಲಿ ದರ್ಶನ್‌-ಆದಿತ್ಯ!

ಕನ್ನಡ ‘ಇಷ್ಕ್‌’ನಲ್ಲಿ ದರ್ಶನ್‌-ಆದಿತ್ಯ!

Subscribe to Filmibeat Kannada

ಚಿತ್ರದ ಹೆಸರು ‘ಸ್ನೇಹಾನಾ ಪ್ರೀತೀನಾ’. ಇದು ಅಮೀರ್‌ಖಾನ್‌, ಕಾಜೋಲ್‌, ಅಜಯ್‌ ದೇವ್‌ಗನ್‌ ಮತ್ತು ಜ್ಯೂಹಿ ಚಾವ್ಲಾ ಅಭಿನಯದ ಹಿಂದಿ ಚಿತ್ರ ‘ಇಷ್ಕ್‌’ನ ರೀಮೇಕ್‌ ಎಂಬುದು ನಿಮಗೆ ಗೊತ್ತಿರಲಿ. ಹಿಂದಿಯಲ್ಲಿ ನಿರ್ಮಾಣಗೊಂಡು ಹನ್ನೊಂದು ವರ್ಷಗಳಾದ ನಂತರ ಕನ್ನಡದಲ್ಲಿ ರೀಮೇಕ್‌ ಪ್ರಕ್ರಿಯೆ ಶುರುವಾಗಿದೆ. ಲಕ್ಷ್ಮೀ ರೈ ಮತ್ತು ಸಿಂಧು ಥೊಲಾನಿ ನಾಯಕಿಯರ ಪಾತ್ರದಲ್ಲಿ ಮಿಂಚಲಿದ್ದಾರೆ.

ಅಣಜಿ ನಾಗರಾಜ್‌ ಚಿತ್ರದ ನಿರ್ಮಾಪಕರಾಗಿದ್ದು, ಶಾಹೂರಾಜ್‌ ಶಿಂಧೆ ಮೊದಲ ಬಾರಿಗೆ ನಿರ್ದೇಶನ ಮಾಡುವ ಅವಕಾಶ ಪಡೆದಿದ್ದಾರೆ. ಈ ಮೊದಲು ಅವರು, ರಾಜೇಂದ್ರಬಾಬು, ರವಿಚಂದ್ರನ್‌, ಮುತ್ಯಾಲ ಸುಬ್ಬಯ್ಯ ಹಾಗೂ ಕೆಎಸ್‌ಆರ್‌ ದಾಸ್‌ ಅವರಂತಹ ಖ್ಯಾತ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಹಿಂದಿಯ ‘ಇಷ್ಕ್‌’ 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ನಾನು ನಾಲ್ಕು ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸುತ್ತಿದ್ದೇನೆ. ಪ್ರೇಮ, ಸೆಂಟಿಮೆಂಟ್‌, ಆ್ಯಕ್ಷನ್‌, ಹಾಸ್ಯದ ಪರಿಪಾಕವಾಗಿರುವ ಈ ಚಿತ್ರ ಭರ್ಜರಿ ಹಿಟ್‌ ಆಗಲಿದೆ ಎಂದು ನಿರ್ಮಾಪಕ ಅಣಜಿ ನಾಗರಾಜ್‌ ಈಗಾಗಲೇ ಘೋಷಿಸಿದ್ದಾರೆ.

28 ಜನರನ್ನೊಳಗೊಂಡ ಚಿತ್ರತಂಡ, ಚಿತ್ರೀಕರಣದ ನಿಮಿತ್ತ ಆಸ್ಟ್ರಿಯಾ, ಜರ್ಮನಿ ಹಾಗೂ ಇಟಲಿ ದೇಶಗಳಿಗೆ ಅಕ್ಟೋಬರ್‌ 3ರಂದು ಪ್ರಯಾಣ ಬೆಳೆಸಿದೆ. 15 ದಿನಗಳ ಕಾಲ ಚಿತ್ರೀಕರಣ ನಡೆಸಿ ತಂಡ ವಾಪಸಾಗಲಿದೆ.

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada