»   » ರವಿಚಂದ್ರನ್‌ ‘ಸೊಂಟೋಪಾಖ್ಯಾನ’

ರವಿಚಂದ್ರನ್‌ ‘ಸೊಂಟೋಪಾಖ್ಯಾನ’

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ನಮ್ಮಲ್ಲಿ ಸಿಂಹಕಟಿಯರು ಇಲ್ಲ. ಅದಕ್ಕೇ ಬಾಲಿವುಡ್‌ ಬಾಲೆಯರನ್ನೇ ನನ್ನ ಸಿನಿಮಾಗಳಿಗೆ ಕರೆ ತರುವುದು- ಹಾಗಂತ ರವಿಚಂದ್ರನ್‌ ಹಿಂದೂಮುಂದೂ ಯೋಚಿಸದೆ ಹೇಳುತ್ತಾರೆ. ರಮ್ಯಕೃಷ್ಣ ಅವರದ್ದು ಎಂತಹ ಸಿಂಹಕಟಿ ಅಂತ ಕೆಣಕಿದರೆ ನಕ್ಕು ಸುಮ್ಮನಾಗುತ್ತಾರೆ.

ರವಿ ಮುಂದೆ ಈ ಪ್ರಶ್ನೆ ಇಡಲು ಬಲವಾದ ಕಾರಣಗಳಿದ್ದವು. ‘ಒಂದಾಗೋಣ ಬಾ’ ಚಿತ್ರ ನಿಂತಿರುವುದೇ ಶಿಲ್ಪಾ ಶೆಟ್ಟಿ ಸೊಂಟದ ಮೇಲೆ ಎಂಬ ಆರೋಪ ಇದೆ. ಇದನ್ನು ರವಿ ಕೂಡ ಒಪ್ಪಿಕೊಳ್ಳುತ್ತಾರೆ.

ರವಿ ಮಾತು ಮುಂದುವರೆಸುತ್ತಾರೆ- ನೋಡಿ, ಶಿಲ್ಪಾ ಶೆಟ್ಟಿ ಐದು ವರ್ಷಗಳ ಹಿಂದೆ ‘ಪ್ರೀತ್ಸೋದ್‌ ತಪ್ಪಾ’ ಚಿತ್ರದಲ್ಲಿ ಹೇಗೆ ದೇಹ ಇಟ್ಟುಕೊಂಡಿದ್ದರೋ ಇವತ್ತಿಗೂ ಅದನ್ನ ಕಾಪಾಡಿಕೊಂಡಿದ್ದಾರೆ. ಅವರ ಸೊಂಟ ನೋಡಿದವರು ವ್ಹಾರೆ ವ್ಹಾ ಅನ್ನದಿರರು. ನಮ್ಮ ನಟಿಯರಿಗೆ ಪ್ರತಿಭೆಯೇನೋ ಇದೆ. ಆದರೆ ಫಿಗರ್‌ ಕಾನ್ಷಿಯಸ್‌ನೆಸ್‌ ಇಲ್ಲ. ಬಲವಂತವಾಗಿ ಅವರಿಗೆ ಮಿನಿಗಳನ್ನು ತೊಡಿಸಿ ಕುಣಿಸಿದರೆ ಅದು ಅಪಹಾಸ್ಯವಾಗುವ ಅಪಾಯವೂ ಇದೆ. ಆದರೆ ಬಾಲಿವುಡ್‌ ನಟಿಯರು ಏಗಿ ಬಂದಿರುವ ಜಗತ್ತೇ ಬೇರೆ. ಅಲ್ಲಿ ಕೊಂಚ ಬೊಜ್ಜು ಬಂದರೂ ನಾಯಕಿ ರಿಟೈರ್‌ ಆದಂತೆಯೇ ಸರಿ. ಜೊತೆಗೆ ಅವರಿಗೆ ತುಂಡು ಬಟ್ಟೆ ತೊಡುವ ವಿಷಯದಲ್ಲಿ ಕಿಂಚಿತ್ತೂ ಮುಜುಗರ ಇರುವುದಿಲ್ಲ. ಆದ ಕಾರಣ ಬಟ್ಟೆಯ ಬಗ್ಗೆ ಯಾವುದೇ ಅಳುಕಿಲ್ಲದೆ ಭಾವಾಭಿನಯದಲ್ಲೂ ಮಿಂಚುತ್ತಾರೆ. ನಮ್ಮ ನಾಯಕಿಯರೂ ಅವರಿಂದ ಕಲಿಯುವುದು ಸಾಕಷ್ಟಿದೆ.

ರವಿ ತಮ್ಮ ‘ಮಲ್ಲ’ ಚಿತ್ರದ ಕ್ಯಾಸೆಟ್‌ ಬಿಡುಗಡೆಗೆ ಕರೆಸಿದ್ದು ಆಗಿನ ನಿಂಬೆ ಹಣ್ಣಿನಂಥಾ ಹುಡುಗಿ ಜ್ಯೂಹಿ ಚಾವ್ಲಾ ಅವರನ್ನು. ಈ ವಿಷಯದಲ್ಲೂ ರವಿಯ ಬಾಲಿವುಡ್‌ ಮೋಹ ಕಂಡು ಕೆಲವರು ಒಳಗೊಳಗೇ ಗೊಣಗಿಕೊಂಡಿದ್ದೂ ಉಂಟು. ಮಲ್ಲ ಚಿತ್ರದಲ್ಲಿ ಎಡಿಟಿಂಗ್‌ ಕೆಲಸವನ್ನೂ ನಿಭಾಯಿಸುವುದರ ಮೂಲಕ ರವಿ ಇನ್ನೊಂದು ಸಿನಿಮಾ ಸಾಹಸ ಮಾಡಿದ್ದಾರೆ. ಈ ಚಿತ್ರದ ಹೈಲೈಟುಗಳಲ್ಲಿ ಎಡಿಟಿಂಗ್‌ ಮುಖ್ಯವಾಗಿರುತ್ತದೆ ಅನ್ನೋದು ಅವರ ಅಂಬೋಣ.

ನಾಯಕಿಯರ ಬಗ್ಗೆ ರವಿಚಂದ್ರನ್‌ ಇಂತೆಲ್ಲ ಕಾಮೆಂಟ್‌ ಮಾಡುತ್ತಿರುವಾಗಲೇ ಹಿಂದೆ ಇದ್ದವರಾರೋ ಮೆಲ್ಲಗೆ, ನಿಮ್ಮ ಫಿಗರ್‌ ಕಾನ್ಷಿಯಸ್‌ನೆಸ್‌ ಬಗ್ಗೆ ಏನಂತೀರಿ ಸ್ವಾಮಿ ಅಂತ ಕೆಣಕಿದರು. ಹೌದು, ರವಿಗೆ ಬೊಜ್ಜು ಜಾಸ್ತಿಯಾಗಿದೆ ಅಂತ ‘ಒಂದಾಗೋಣ ಬಾ’ ನೋಡಿದವರೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ. ಇದನ್ನು ಒಪ್ಪಿಕೊಂಡಿರುವ ರವಿಚಂದ್ರನ್‌, ‘ಹೊಟ್ಟೆ ಕರಗಿಸಬೇಕು’ ಅಂತ ಒಮ್ಮೆ ಹೊಟ್ಟೆ ಮುಟ್ಟಿಕೊಂಡರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada