»   » ತೆಲುಗು ಸಿನಿಮಾ ಉದ್ದಿಮೆಯಲ್ಲಿ ಸಂಚಲನೆ ಸೃಷ್ಟಿಸಿರುವ ರಕ್ಷಿತಾ

ತೆಲುಗು ಸಿನಿಮಾ ಉದ್ದಿಮೆಯಲ್ಲಿ ಸಂಚಲನೆ ಸೃಷ್ಟಿಸಿರುವ ರಕ್ಷಿತಾ

Posted By: Staff
Subscribe to Filmibeat Kannada

ಬೆಂಗಳೂರು ಹುಡುಗಿ ರಕ್ಷಿತಾ ಮುಂದಿನ ಚಿತ್ರ ಯಾವುದು?
ಕನ್ನಡದ್ದಂತೂ ಯಾವುದೂ ಇಲ್ಲ, 'ನಿಜಂ" ಎಂಬ ತೆಲುಗು ಚಿತ್ರ ಕೈಯಲ್ಲಿದೆ. ಈಗ ಟಾಲಿವುಡ್‌ನ ಸೆನ್ಸೇಷನ್‌ ಹುಡುಗೀರ ಯಾದಿಯಲ್ಲಿ ಚಾಲ್ತಿಯಲ್ಲಿರುವ ಹೆಸರು ರಕ್ಷಿತಾ. ಅಪ್ಪು ಚಿತ್ರದ ತೆಲುಗು ರೀಮೇಕ್‌ 'ಈಡಿಯಟ್‌"ನಿಂದ ಪಡ್ಡೆಗಳ ಹೃದಯಕ್ಕೆ ಲಗ್ಗೆಯಿಟ್ಟಿರುವ ರಕ್ಷಿತಾ, ದೊಡ್ಡ ದೊಡ್ಡ ತೆಲುಗು ನಿರ್ಮಾಪಕ- ನಿರ್ದೇಶಕ- ನಟರ ಸವಾಲಿಗೆ ನಿರ್ಭೀತಳಾಗಿ ಜವಾಬು ಕೊಡುತ್ತಿರುವುದು ಇನ್ನೊಂದು ವಿಶೇಷ. ಇದೇ ಕಾರಣಕ್ಕೆ ಎಷ್ಟೋ ತೆಲುಗು ಸಿನಿಮಾ ಮಂದಿಗೆ ರಕ್ಷಿತಾ ಮೆಚ್ಚಾಗಿದ್ದಾಳೆ. ತೆಲುಗಿನ ಟಾಪ್‌ ನಾಯಕರು ರಕ್ಷಿತಾ ಜೋಡಿಯಾಗಿ ನಟಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂಬ ರಿಪೋರ್ಟೂ ಉಂಟು !

ಇಂತಿಪ್ಪ ರಕ್ಷಿತಾ ನಿಜಂ ಚಿತ್ರದ ಪೂರಾ ಸೆರಗೇ ಇಲ್ಲದ ಸೀರೆ ಉಟ್ಟು ನಟಿಸಲು ಹಿಂದೂಮುಂದೂ ನೋಡದೆ ಒಪ್ಪಿಕೊಂಡಿದ್ದಾರೆ. ಚಿತ್ರದ ಸೆಟ್‌ಗೆ ಹಠಾತ್ತನೆ ಬಂದ ಹಿರಿಯ ನಟರೊಬ್ಬರು, 'ಏನಮ್ಮಾ.. ನೀನು ಎಂಥಾ ಬಟ್ಟೆ ತೊಡೋಕೂ ಹಿಂದೇಟು ಹಾಕೋಲ್ವಾ" ಅಂತ ನೇರವಾಗಿ ಪ್ರಶ್ನಿಸಿದರು. ಅದಕ್ಕೆ ರಕ್ಷಿತಾ ಕೊಟ್ಟ ಉತ್ತರ ಏನು ಗೊತ್ತೆ- 'ಕನಿಷ್ಠ ಬಟ್ಟೆ ಹಾಕಿಕೊಳ್ಳುತ್ತಾರೆ ಎಂಬ ಕಾರಣಕ್ಕೇ ನಮಗಿಂತ ಹೆಚ್ಚು ಸಂಭಾವನೆ ಕೊಟ್ಟು ಉತ್ತರ ದಿಕ್ಕಿನ ಹುಡುಗೀರನ್ನು ಕರೆ ತರುತ್ತೀರಿ. ಅವರು ಆ ಉಡುಗೆಗಳಲ್ಲಿ ರಂಭೆ, ಮೇನಕೆ ಥರಾ ಕಾಣಿಸ್ತಾರೆ ಅಂತೆಲ್ಲಾ ಕಾಂಪ್ಲಿಮೆಂಟ್ಸ್‌ ಕೊಡ್ತೀರಿ. ಅದೇ ನಾವು ಪಾತ್ರಕ್ಕೆ ತಕ್ಕಂತೆ ಗ್ಲಾಮರಸ್‌ ಬಟ್ಟೆ ತೊಟ್ಟರೆ ಅದಕ್ಕೆ ಅಶ್ಲೀಲದ ಪಟ್ಟಿ ಹಚ್ತೀರಿ. ಸ್ವಿಮ್ಮಿಂಗ್‌ ಪೂಲಲ್ಲಿ ಜೀನ್ಸ್‌ ತೊಟ್ಟುಕೊಳ್ಳೋಕಾಗುತ್ತಾ, ಹೇಳಿ?"

ಪ್ರಶ್ನೆ ಕೇಳಿದ ನಟ ದೂಸರಾ ಮಾತಾಡದೆ ಎದ್ದು ಹೋದರಂತೆ !

English summary
I can't wear a jeans in a swimming pool : Rakshitha
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada