ವೇಣು ವೃತ್ತಿಪರತೆಗೆ ಜೈ ಅಂದ ಚಿಂಗಾರಿ ಮನು ಗೌಡ

By * ಶ್ರೀರಾಮ್ ಭಟ್
<ul id="pagination-digg"><li class="previous"><a href="/news/06-cinematographer-hc-venu-professionalism-aid0172.html">« Previous</a>

Manu Gowda
ವೇಣುವನ್ನು ಸಾಕಷ್ಟು ಜನ ಸಾಕಷ್ಟು ಬಾರಿ ಹೊಗಳಿದ್ದಾರೆ. ಆದರೆ ಈ ಬಾರಿ ದೊಡ್ಡ ಬ್ಯಾನರ್ ಹಾಗೂ ಬಹುನಿರೀಕ್ಷೆಯ ಚಿತ್ರ 'ಚಿಂಗಾರಿ' ನಿರ್ಮಾಪಕರಾದ ಮಹಾದೇವ್ ಮತ್ತು ಮನು ಗೌಡ ವೇಣುರ ಅತ್ಯದ್ಭುತ ವೃತ್ತಿಕೌಶಲ್ಯವನ್ನು ಹೊಗಳಿದ್ದಾರೆ. ಕಾರಣ ಅವರ ಟೈಮ್ ಸೆನ್ಸ್ ಮತ್ತು ವೃತ್ತಿಪರತೆ. ಚಿಂಗಾರಿ ಚಿತ್ರದಲ್ಲಿ ಅವರ ಕ್ಯಾಮರಾ ಕೆಲಸ ಅತ್ಯದ್ಭುತವಾಗಿ ಮೂಡಿಬಂದಿದೆಯಂತೆ.

ಚಿಂಗಾರಿ ನಿರ್ಮಾಪಕರಾದ ಮನು ಗೌಡ ವೇಣು ಕುರಿತು "ಅವರೊಬ್ಬ ಶ್ರಮಜೀವಿ ಮತ್ತು ಸರಳ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ರಾತ್ರಿ ಶೂಟಿಂಗ್ ಎಷ್ಟೇ ತಡವಾಗಿದ್ದರೂ ಕೂಡ ಮರುದಿನ ಬೆಳಿಗ್ಗೆ 6ಕ್ಕೆ ಅಥವಾ ಹೇಳಿದ ವೇಳೆಗೆ ಕ್ಯಾಮರಾ ಸಮೇತ ವೇಣು ಹಾಜರ್. ಯಾವ ಕಿರಿಕಿರಿ ಗೊಂದಲಗಳಿಲ್ಲದೇ ವೇಣು ಕೆಲಸ ಮುಗಿಸಿ ಕೇವಲ 2-3 ತಾಸುಗಳ ನಿದ್ದೆ ಮಾಡಿಯಾದರೂ ಮತ್ತೆ ಫ್ರೆಶ್ ಆಗಿ ಬರುತ್ತಾರೆ.

ಶೂಟಿಂಗ್ ವೇಳೆಯಲ್ಲೂ ಕೂಡ ನೈಸರ್ಗಿಕ ಬೆಳಕನ್ನು ಆಧರಿಸಿ ಚೆನ್ನಾಗಿ ಕ್ಯಾಮರಾ ಕೆಲಸ ಮಾಡುತ್ತಾರೆ. ಅದೆಷ್ಟೇ ರಿಸ್ಕ್ ಆಗಿದ್ದರೂ ಅದನ್ನು ನಿರ್ವಹಿಸಿ ಸಹಜ ಬೆಳಕಿನಲ್ಲಿ ಅವರು ಕಟ್ಟಿಕೊಡುವ ದೃಶ್ಯವೈಭವ ಅಮೋಘ. ಅನಾವಶ್ಯಕ ಬೆಳಕಿನ ಸೆಟ್ಟಿಂಗ್ ಮಾಡಿಸದ ವೇಣು 'ಪ್ರೊಡ್ಯೂಸರ್ ಫ್ರೆಂಡ್ಲಿ'. ವೇಣು ವೃತ್ತಿಪರತೆಗೆ ಸಾಕ್ಷಿ 'ಚಿಂಗಾರಿ' ಚಿತ್ರದಲ್ಲಿ ಸಿಗಲಿದೆ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/06-cinematographer-hc-venu-professionalism-aid0172.html">« Previous</a>

More from Filmibeat

English summary
Cinematographer H C Venu is famous for his Simplicity and excellent camera work. His cinematography in the Darshan movie 'Chigari' is awesome, as the producer Manu Gowda said. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X