twitter
    For Quick Alerts
    ALLOW NOTIFICATIONS  
    For Daily Alerts

    50ಪ್ಲಸ್ ದಾಟಿದ ನಾಗರೀಕರಿಗೆ ಚಿತ್ರೋತ್ಸವ

    By Mahesh
    |

    ಡಿಗ್ನಿಟಿ ಫೌಂಡೇಶನ್‌ ಎಂಬ ಸರ್ಕಾರೇತರ ಸಂಸ್ಥೆ 50ವರ್ಷ ವಯಸ್ಸು ದಾಟಿದ ಹಿರಿಯರಿಗಾಗಿ ಸಿನಿಮಾ ಉತ್ಸವ ಹಮ್ಮಿಕೊಂಡಿದೆ. ಈ ಮೂಲಕ ಹಿರಿಯ ನಾಗರಿಕರಿಗೆ ತಮ್ಮ ಯೌವ್ವನ ಕಾಲದತ್ತ ಇಣುಕಿ ನೋಡಲು ಅಪೂರ್ವ ಅವಕಾಶ ಒದಗಿಸಿದೆ. ಅಂದಿನ ಕಾಲದ ಸಿನಿಮಾ ಪ್ರದರ್ಶನ. ಅಂದು- ಇಂದಿನ ಸಿನಿತಾರೆಯರ ಜೊತೆಯಲ್ಲಿ ಹಳೆಯ ಹಿಟ್ ಸಿನಿಮಾ ವೀಕ್ಷಣೆಯ ಸುವರ್ಣಾವಕಾಶ ನಗರದ ಭಾಲಭವನ ಸಭಾಂಗಣದಲ್ಲಿ ಮಾತ್ರ.

    1950ರಿಂದ 1970 ರ ಅವಧಿಯಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾಗಳನ್ನು ಏಪ್ರಿಲ್7 ರಿಂದ 11ರವರೆಗೆ ಕಬ್ಬನ್ ಪಾರ್ಕ್ ನ ಭಾಲಭವನ ಸಭಾಂಗಣದಲ್ಲಿ ಪ್ರದರ್ಶಿಸಲಾಗುವುದು. ತಮ್ಮ ಕಾಲದ ಚಿತ್ರ ಜಗತ್ತಿನ ವೈಭವವನ್ನು ಮತ್ತೊಮ್ಮೆ ನೋಡಿ ಮೆಲುಕು ಹಾಕುವ ಅವಕಾಶ ಈ ಹಿರಿಯ ಜೀವಗಳಿಗೆ ಲಭಿಸಲಿದೆ.ಕನ್ನಡ ಮಾತ್ರವಲ್ಲದೆ ಹಿಂದಿ ಹಾಗೂ ಇಂಗ್ಲೀಷ್ ಚಿತ್ರಗಳು ಈ ಚಿತ್ರೋತ್ಸವ ಸರಣಿಯಲ್ಲಿ ಸೇರಿದೆ. ಏ.7ರಂದು ಬಂಗಾರದ ಮನುಷ್ಯ ಚಿತ್ರದೊಂದಿಗೆ ಪ್ರಾರಂಭವಾಗಿ ನಾಗರಹಾವು, ನವರಂಗ್(ಹಿಂದಿ), ಪ್ಯಾಸಾ(ಹಿಂದಿ) ಹಾಗೂ ದಿ ಆಡ್ ಕಪಲ್ (ಆಂಗ್ಲ) ಚಿತ್ರಗಳು ರಂಜನೆಗೆ ಸಿದ್ಧವಾಗಿವೆ.

    ಡಿಗ್ನಿಟಿ ಫೌಂಡೇಷನ್‌ನ ಬ್ರಾಂಡ್ ರಾಯಭಾರಿ ರಮೇಶ್ ಅರವಿಂದ್ ಅವರು ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ 'ಡಿಗ್ನಿ ಟಿ ಫೌಂಡೇಷನ್ ಹಿರಿಯ ನಾಗರಿಕರ ಹಿತಕ್ಕಾಗಿ ದುಡಿಯುತ್ತಿದೆ. ಈ ಸಂಸ್ಥೆಯೊಂದಿಗೆ ಸೇರಿ ಕೆಲಸ ಮಾಡುವುದರಲ್ಲಿ ಹೆಮ್ಮೆ ಇದೆ. ಹಿರಿಯರಿಗೆ ಅವರ ಕಾಲದ ಸಿನಿಮಾಗಳನ್ನು ಪ್ರದರ್ಶಿಸಿ ಖುಷಿಪಡಿಸುವ ಕೆಲಸ ನಿಜಕ್ಕೂ ಶ್ಲಾಘನೀಯ. ಇದರಲ್ಲಿ ಹೊಸತನವಿದೆ. ನಾನಂತೂ ತುಂಬಾ ಕುತೂಹಲ ಹೊಂದಿದ್ದೇನೆ" ಎಂದರು.

    ಡಿಗ್ನಿಟಿ ಫೌಂಡೇಶನ್‌ನ ಕಾರ್ಯಕ್ರಮದಲ್ಲಿ ನಿರಂತರ ಗುರುತಿಸಿಕೊಂಡಿರುವ ಚಿತ್ರ ನಿರ್ಮಾಪಕಿ ಹಾಗೂ ನಟಿ ತಾರಾ ಅನುರಾಧ ಚಿತ್ರೋತ್ಸವದ ಕುರಿತು ಹೇಳಿದ್ದು ಹೀಗೆ: ಡಿಗ್ನಿಟಿ ಯಾವಾಗಲೂ ಹೊಸತನದ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಚಿತ್ರೋತ್ಸವವೂ ಹೊಸ ಶೈಲಿಯದ್ದಾಗಿದೆ. ಹಿರಿಯ ನಾಗರಿಕರಿಗೆ ಅವರ ಕಾಲದ ಚಿತ್ರಗಳನ್ನು ನೋಡಲು ಅಂದಿನ ರಸಗಳಿಗೆಯನ್ನು ಮೆಲುಕು ಹಾಕಲು ಇದು ಸುವರ್ಣಾವಕಾಶ" ಎಂದರು.

    ಈ ವಿನೂತನ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶೈಲು ಶ್ರೀನಿವಾಸನ್, ಹಿರಿಯ ನಾಗರಿಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ. ಅವರ ನಿರೀಕ್ಷೆಗಳಿಗೆ ಅನುಸರಿಸಿ ಡಿಗ್ನಿಟಿ ಫೌಂಡೇಶನ್ ದಿನಪೂರ್ತಿ ಕಾರ್ಯಾಚರಿಸುವ ಸಹಾಯವಾಣಿ, ಅನಿಸಿಕೆಗಳನ್ನು ಬರೆಯಲು ವೃತ್ತಪತ್ರಿಕೆ, ದುಡಿಯುವ ಸಾಮರ್ಥ್ಯ ಇರುವವರಿಗೆ ನೌಕರಿ ಅವಕಾಶ, ದೂರವಾಣಿ ಮೂಲಕ ಮಾಹಿತಿ ನೀಡುವ ಸೌಲಭ್ಯ ಇತ್ಯಾದಿ ಅವಕಾಶಗಳಿವೆ. ಇದರೊಂದಿಗೆ ಐವತ್ತು ವಯಸ್ಸು ದಾಟಿದವರು ಒಂದೆಡೆ ಸೇರಿ ಹಳೆಯ ಸಿನಿಮಾ ವೀಕ್ಷಿಸುವುದರೊಂದಿಗೆ ಆ ಕಾಲದ ರಸ ಸನ್ನಿವೇಶಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿರುವುದು ಹೊಸ ಪ್ರಯತ್ನ" ಎಂದರು.

    Tuesday, April 6, 2010, 18:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X