ಸವಾರಿ ರಘು ಮುಖರ್ಜಿಯ 'ಸವಾರಿ ಟು 1000 ಎಡಿ'

ಸವಾರಿ ಚಿತ್ರದಲ್ಲಿ ಮನೆಮಾತಾಗಿದ್ದ ರಘು ಮುಖರ್ಜಿ ನಂತರ ಆಗೊಮ್ಮೆ ಈಗೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಮುಖ ತೋರಿಸುತ್ತಿದ್ದರೂ ಪೂರ್ಣ ಪ್ರಮಾಣದ ನಾಯಕನಾಗಿ ಮರಳಿರಲಿಲ್ಲ. ಇದೀಗ ಆ ಕಾಲ ಕೂಡಿ ಬಂದಿದೆ. ರಘು ಹೊಸ ಚಿತ್ರ 'ಸವಾರಿ ಟು 1000 ಎಡಿ' ಯಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಮುಂಬೈನ ರೇಷ್ಮಾ ಥಕ್ಕರ್ ಆಯ್ಕೆಯಾಗಿದ್ದಾರೆ.

ತಿಮ್ಮಪಳ್ಳಿ ಚಂದ್ರು ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಅವರಿಗಿದು ಚೊಚ್ಚಿಲ ಚಿತ್ರ. ಈ ಮೊದಲು ಅವರು ಕೋಡ್ಲು ರಾಮಕೃಷ್ಣ, ರಾಜೇಂದ್ರಕುಮಾರ್ ಆರ್ಯ ಮುಂತಾದವರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಚಿತ್ರ ಖಂಡಿತವಾಗಿಯೂ ಈ ಮೊದಲು ತೆರೆಗೆ ಬಂದಿದ್ದ ಸವಾರಿಯ ಮುಂದಿನ ಭಾಗವಲ್ಲ.

ಫಾರಿನ್ ರಿಟರ್ನ್ಡ್ ಅಹಂಕಾರಿ ಸಾಫ್ಟ್ ವೇರ್ ಉದ್ಯೋಗ ಹೊಂದಿರುವ ಹುಡುಗನ ಕಥೆ ಇದಾಗಿದ್ದು, ನಂತರ ಬಾಳಲ್ಲಿ ಪ್ರವೇಶವಾದ ಹುಡುಗಿಯಿಂದ ಹೇಗೆ ಆತ ಬದಲಾಗುತ್ತಾನೆ ಎಂಬ ಕಥೆ ಎಂದಿದ್ದಾರೆ ನಿರ್ದೇಶಕರು. ಈ ಚಿತ್ರಕ್ಕೆ ಸಂಜೀವ ಮೆಗೋಟಿ ಸಂಗೀತ ನೀಡುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actor Savari Fame Raghu Mukherji acts new movie 'Savari to 1000 AD'. Timmapalli Chandru Directs this movie for the first time in Sandalwood. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X