»   » 12 ಮಂದಿ ನಟಿಯರೊಂದಿಗೆ ಉಪೇಂದ್ರ

12 ಮಂದಿ ನಟಿಯರೊಂದಿಗೆ ಉಪೇಂದ್ರ

Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಹಲವಾರು ಕಾರಣಗಳಿಗೆ 'ಮಸ್ತ್ ಮಜಾ ಮಾಡಿ'ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಸುದೀಪ್, ವಿಜಯ ರಾಘವೇಂದ್ರ, ದಿಗಂತ್ ಹಾಗೂ ನಾಗಕಿರಣ್ ನಟಿಸಿದ್ದಾರೆ ಎಂಬುದು ಒಂದು ಕಾರಣವಾದರೆ. ಸೂಪರ್ ಸ್ಟಾರ್ ಉಪೇಂದ್ರ ಚಿತ್ರದ ಒಂದು ಹಾಡಿನಲ್ಲಿ ಕನ್ನಡದ 12 ಮಂದಿ ನಟಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ ಎಂಬುದು ಮತ್ತ್ತೊಂದು ಕಾರಣ. ಉಪೇಂದ್ರರೊಂದಿಗೆ ಕುಣಿದ ಈ 12 ಮಂದಿ ನಟಿಯರು ಯಾರು? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇದೀಗ ತೆರೆ ಬಿದ್ದಿದೆ. 12 ಮಂದಿ ದಂತದ ಗೊಂಬೆಗಳು ಉಪೇಂದ್ರರೊಂದಿಗೆ ಒಟ್ಟಿಗೆ ನಟಿಸಲು ಒಪ್ಪಿರುವುದೇ ಒಂದು ಪವಾಡ!

ಮಸ್ತ್ ಮಜಾ ಮಾಡಿ ಚಿತ್ರದಲ್ಲಿನ 'ಓಂ ಶಾಂತಿ ಓಂ' ಎಂಬ ಹಾಡಿಗೆ ಉಪೇಂದ್ರನೊಂದಿಗೆ ಸುಮನ್ ರಂಗನಾಥ್, ರೇಖಾ, ಶರ್ಮಿಳಾ ಮಾಂಡ್ರೆ, ಅಂದ್ರಿತಾ ರೇ, ಸಂಜನಾ, ರಾಗಿಣಿ, ಮಾಹಿ, ರಮಣೀತೋ ಚೌದರಿ, ಗೌರಿ ಮುಂಜಾಲ್ ಹಾಗೂ ಕೀರ್ತಿ ಚಾವ್ಲಾ ಹೆಜ್ಜೆ ಹಾಕಿದ್ದಾರೆ. ಈ ಒಂದು ಹಾಡಿಗಾಗಿ ನಿರ್ದೇಶಕಿ ಸೌಂದರ್ಯ ಜಗದೀಶ್ ರು.50 ಲಕ್ಷ ಖರ್ಚು ಮಾಡಿದ್ದಾರೆ. ಮತ್ತಷ್ಟು ಹಣವನ್ನು ಈ ಚಿತ್ರಕ್ಕಾಗಿ ತೊಡಗಿಸಿ ಅನಾಥಾಶ್ರಮಗಳಿಗೆ ನೆರವಾಗಬೇಕು ಎಂಬುದು ನಿರ್ದೇಶಕಿಯ ಉದ್ದೇಶ.

ಶಿವರಾಜ್ ಕುಮಾರ್ ರ'ನಂದ' ಚಿತ್ರದ ನಿರ್ದೇಶಿಸಿದ ಅನಂತ್ ರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ತಾರಾಗಣದಲ್ಲಿ ಜೆನ್ನಿಫರ್ ಕೊತ್ವಾಲ್, ಸಾಧು ಕೋಕಿಲ, ರಂಗಾಯಣ ರಘು, ಸಿಹಿಕಹಿ ಚಂದ್ರು, ಕೋಮಲ್ ಕುಮಾರ್ ಮುಂತಾದವರಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ ಬಾಲಾಜಿ ಸಂಗೀತ ಈ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಬಾಕ್ಸಾಫೀಸಲ್ಲಿ ಉಪ್ಪಿಯ ಮತ್ತೊಂದು 'ರಕ್ತ ಕಣ್ಣೀರು'!
ಪಂಚನಾಯಕರ ಚಿತ್ರದಲ್ಲಿ ರಿಯಲ್ ಸ್ಟಾರ್
ಬುದ್ಧಿವಂತ 'ಉಪ್ಪಿ'ಗಿಂತ ರುಚಿ ಬೇರೆ ಇಲ್ಲ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada