ಪಂಚರಂಗಿ ನಿಧಿ ಸುಬ್ಬಯ್ಯ ಬಾಲಿವುಡ್ ಪಂವ್ ಪಂವ್

<ul id="pagination-digg"><li class="next"><a href="/news/06-actress-nidhi-subbaiah-bollywood-movie-aid0172.html">Next »</a></li></ul>

ನಟಿ ನಿಧಿ ಸುಬ್ಬಯ್ಯ ಎಂಬ ಅಪ್ಪಟ ಕನ್ನಡತಿ ಬಾಲಿವುಡ್ ಪಾಲಾಗುವ ಸಂಭವ ಹೆಚ್ಚಾಗಿದೆ. 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ' ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಈ ಬೆಡಗಿ, ಯೋಗರಾಜ್ ಭಟ್ಟರ 'ಪಂಚರಂಗಿ' ಮೂಲಕ ಕರ್ನಾಟಕದಲ್ಲಿ ಮನೆಮನೆಮಾತಾದವರು. ಇದೀಗ ಬಾಲಿವುಡ್ ಚಿತ್ರವೊಂದರ ಚಿತ್ರೀಕರಣದಲ್ಲಿರುವ ನಿಧಿಗೆ ಮತ್ತೆ ಅಲ್ಲಿಯೇ ಅವಕಾಶ ಸಿಕ್ಕಿದೆ.

ಬಾಲಿವುಡ್‌ ಒಂದೆರಡು ಚಿತ್ರಗಳು ನಿಧಿಗೆ ಸಿಕ್ಕಿರೋದು ಈ ಹಿಂದೆಯೇ ಸುದ್ದಿಯಾಗಿತ್ತು. ಅದರಲ್ಲಿ ಅಕ್ಷಯ್ ಕುಮಾರ್ ನಾಯಕರಾಗಿರುವ 'ಓ ಮೈ ಗಾಡ್' ಚಿತ್ರ ಒಂದಾದರೆ ಕನ್ನಡ ನಟ ದಿಗಂತ್ ನಾಯಕರಾಗಿರುವ 'ಜಾಝ್' ಇನ್ನೊಂದು. ಓ ಮೈ ಗಾಡ್ ಚಿತ್ರೀಕರಣ ನಡೆಯುತ್ತಿದೆ. ಇನ್ನೊಂದಕ್ಕೆ ಕಾಲ ಕೂಡಿ ಬಂದಿಲ್ಲ.

ಇದೀಗ ದೊಡ್ಡದೊಂದು ಪ್ರೊಜೆಕ್ಟ್ ನಿಧಿ ಕೈ ಸೇರಿದೆಯೆಂಬ ಸುದ್ದಿ ಬಂದಿದೆ. ಇದರ ಬಗ್ಗೆ ನಿಧಿ ರಹಸ್ಯ ಕಾಪಾಡಿಕೊಂಡಿದ್ದಾರೆ. "ದೊಡ್ಡದೊಂದು ಬ್ಯಾನರ್ ನನ್ನನ್ನು ಸಂಪರ್ಕಿಸಿರುವುದು ಹೌದು. ಆದರೆ, ಇನ್ನೂ ಖಚಿತವಾಗದ ಕಾರಣ ಈಗಲೇ ಏನೂ ಹೇಳಲಾರೆ. ಇದರ ಬಗ್ಗೆ ಯಾವುದೇ ಮಾಹಿತಿ ನೀಡಬಾರದು ಎಂದು ಕಟ್ಟಪ್ಪಣೆ ವಿಧಿಸಿರುವುದರಿಂದ ನನ್ನಿಂದ ಯಾವ ಮಾಹಿತಿಯೂ ಸದ್ಯಕ್ಕೆ ಸಿಗದು" ಎಂದಿದ್ದಾರೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/06-actress-nidhi-subbaiah-bollywood-movie-aid0172.html">Next »</a></li></ul>

More from Filmibeat

English summary
Kannada Actress Nidhi subbaiah acting in Bollywood movie 'O My God'. Now, she got another chance in Bollywood. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X