»   » ಯಾಕೋ ಏನೋ ಪೂಜಾಗಾಂಧಿ ಸ್ವಲ್ಪ ಕಿರಿಕ್ ಅಂತೆ!

ಯಾಕೋ ಏನೋ ಪೂಜಾಗಾಂಧಿ ಸ್ವಲ್ಪ ಕಿರಿಕ್ ಅಂತೆ!

Subscribe to Filmibeat Kannada

ಪಟಪಟನೆ ಹರಳು ಹುರಿದಂತೆ ಕನ್ನಡದಲ್ಲಿ ಮಾತನಾಡುವ ಪೂಜಾಗಾಂಧಿಯನ್ನು ಕಂಡು ಆಕೆಯ ಅಭಿಮಾನಿಗಳು ಸಂಭ್ರಮಿಸಿದ್ದುಂಟು. ನಮ್ಮ ಮನೆ ಹುಡುಗಿ ಎಂದು ಆದರಿಸಿದ್ದೂ ಉಂಟು. ಆದರೆ ಪೂಜಾಗಾಂಧಿ ಬರಬರುತ್ತಾ ಬದಲಾಗತೊಡಗಿದರು. ಸಮಯಕ್ಕೆ ಸರಿಯಾಗಿ ಚಿತ್ರೀಕರಣಕ್ಕೆ ಬರದೆ ಕೈಕೊಡುವುದು. ಸಹಕಲಾವಿದರು, ನಿರ್ದೇಶಕರು ಕಾಯುತ್ತಿದ್ದರೂ ಇನ್ನು ಮೇಕಪ್ ಮುಗಿದಿಲ್ಲ ಎಂದು ಸಬೂಬು ಹೇಳುವುದನ್ನ್ನು ಕಲಿತಿದ್ದಾರಂತೆ.

ಆಕೆಯ ಟೈಂ ಟೇಬಲ್ ಏರುಪೇರಾಗಿರುವುದೆ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಂತೆ. ಒಟ್ಟಿಗೆ ನಾಲ್ಕಾರು ಚಿತ್ರಗಳಿಗೆ ಡೇಟ್ ಕೊಡುವುದು, ಸಮಯ ಹೊಂದಾಣಿಕೆ ಮಾಡಲು ಸಾಧ್ಯವಾಗದೆ ಯಾವ ಚಿತ್ರೀಕರಣಕ್ಕೂ ಸರಿಯಾಗಿ ಹಾಜರಾಗುತ್ತಿಲ್ಲವಂತೆ. ಹಾಗಾಗಿ ನಿರ್ಮಾಪಕ, ನಿರ್ದೇಶಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರಂತೆ. ಹೀಗೇ ಪೂಜಾಗಾಂಧಿ ದೊಡ್ಡ ಕಿರಿಕ್ ‌ಗಳ ಪಟ್ಟಿ ಬೆಳೆಯುತ್ತದೆ.

ಪೂಜಾಗಾಂಧಿ ನಿರ್ದೇಶಕ, ನಿರ್ಮಾಪಕರಿಗೆ ಕಿರಿಕ್ಕು ಕೊಡುತ್ತಿದ್ದರೆ, ಆಕೆಗೆ ಪೋಲಿ ಅಭಿಮಾನಿಗಳ ಕಾಟ ಹೆಚ್ಚಾಗಿದೆಯಂತೆ. ಹೇಗೋ ಏನೋ ಮಾಡಿ ಆಕೆಯ ಮೊಬೈಲ್ ಸಂಖ್ಯೆಯನ್ನು ಪತ್ತ್ತೆ ಹಚ್ಚಿ ಹೊತ್ತಲ್ಲದ ಹೊತ್ತಿನಲ್ಲಿ ಕರೆ ಮಾಡಿ ಪ್ರಾಣ ಹಿಂಡುತ್ತಿದ್ದಾರಂತೆ. ಹಾಗಾಗಿ ಪೂಜಾ ಜುಲೈ ತಿಂಗಳಲ್ಲಿ ಮೂರು ಸಂಖ್ಯೆಗಳನ್ನು ಬದಲಾಯಿಸಿದ್ದಾರೆ. ಹೊಸ ನಂಬರ್ ಸಿಕ್ಕ ಕಾರಣ ಪೂಜಾ ಸಖತ್ ಖುಷಿಯಾಗಿದ್ದಾರೆ. ಈ ಸಂಖ್ಯೆ ತೀರಾ ಆಪ್ತರಿಗಷ್ಟೇ ಗೊತ್ತು, ಮತ್ತಿನ್ಯಾರಿಗೂ ಈ ಸಂಖ್ಯೆ ಗೊತ್ತಿಲ್ಲ ಎನ್ನುತ್ತಾರೆ ಪೂಜಾ.

ತಮ್ಮ ನೆಲೆ ಕಂಡುಕೊಳ್ಳುವವರೆಗೂ ಹೇಗೋ ಹೊಂದಿಕೊಳ್ಳುವ ನಟಿಯರು ಅವಕಾಶಗಳು ಹೆಚ್ಚಾಗುತ್ತಿದ್ದಂತೆ ತಮ್ಮ ಅಸಲಿ ಬುದ್ಧಿಯನ್ನು ತೋರಿಸುವುದು ಕನ್ನಡ ಚಿತ್ರರಂಗದಲ್ಲಿ ಹೊಸದೇನಲ್ಲ. ಇದಕ್ಕೆ ಪೂಜಾಗಾಂಧಿ ಸಹ ಹೊರತಲ್ಲ ಎಂಬುದು ತಡವಾಗಿಯಾದರೂ ಗೊತ್ತಾಗಿದೆ ಅಷ್ಟೆ. ಈ ಹಿಂದೆ ರಮ್ಯಾ, ರಕ್ಷಿತಾ ಮುಂತಾದ ನಾಯಕಿಯರು ತುಂಬಾ ಕಿರಿಕ್ ಪಾರ್ಟಿಗಳು ಅನ್ನುವ ಕೂಗು ಚಿತ್ರೋದ್ಯಮದಲ್ಲಿ ಕೇಳಿಬರುತ್ತಿತ್ತು. ಈ ಸಾಲಿಗೆ ಪೂಜಾಗಾಂಧಿ ಹೊಸ ಸೇರ್ಪಡೆ ಅಷ್ಟೆ.

(ದಟ್ಸ್‌ಕನ್ನಡಸಿನಿ ವಾರ್ತೆ)

ಪೂಜಾಗಾಂಧಿಯ ಆಕರ್ಷಕ ಗ್ಯಾಲರಿ
ಪೂಜಾಗಾಂಧಿ, ಅಜಯ್ ಅವರ ತಾಜ್ ಮಹಲ್ ಟ್ರೈಲರ್
ತಾಜ್ ಮಹಲ್ ವಿಮರ್ಶೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada