ಕಡೆಗೂ ತನ್ನ ಗಂಡನ ಹೆಸರು ಹೇಳಿದ ನಟಿ ರಾಧಿಕಾ!

ರಾಧಿಕಾರಿಗೆ ಮಗುವಾಗಿದ್ದು, ಆ ಮಗುವಿಗೆ ಶಮಿತಾ ಕುಮಾರಸ್ವಾಮಿ ಎಂದು ನಾಮಕರಣ ಮಾಡಿದ್ದು. ಈ ಫೋಟೋಗಳು ಪತ್ರಿಕೆಗಳಲ್ಲಿ ಜಗಜ್ಜಾಹೀರಾಗಿದ್ದು ಗೊತ್ತೆ ಇದೆ. ಇಷ್ಟೆಲ್ಲಾ ಆದರೂ ತನ್ನ ಗಂಡನ ಹೆಸರನ್ನು ಮಾತ್ರ ಹೇಳಿರಲಿಲ್ಲ. ಈಗ 'ಲಕ್ಕಿ' ಚಿತ್ರದ ಪೋಸ್ಟರ್‌ಗಳಲ್ಲಿ ತನ್ನ ಹೆಸರಿನೊಂದಿಗೆ ಗಂಡನ ಹೆಸರನ್ನೂ ಸೇರಿಸಿ ಪ್ರಕಟಿಸಿದ್ದಾರೆ ರಾಧಿಕಾ.
ಈ ಮೂಲಕ ರಾಧಿಕಾ ಅಧಿಕೃತವಾಗಿ ತನ್ನ ಗಂಡ ಯಾರೆಂದು ಹೇಳಿದಂತಾಗಿದೆ. ರಾಧಿಕಾ ಇನ್ನು ಮುಂದೆ ಬರೀ ರಾಧಿಕಾ ಅಲ್ಲ ರಾಧಿಕಾ ಕುಮಾರಸ್ವಾಮಿ. ಅಂದಹಾಗೆ 'ಲಕ್ಕಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಡಾ.ಸೂರಿ (ದುನಿಯಾ ಸೂರಿ ಅಲ್ಲ). ಚಿತ್ರೀಕರಣ ಇನ್ನೇನು ಶೀಘ್ರದಲ್ಲೆ ಮುಗಿಯಲಿದ್ದು, ಲಕ್ಕಿ ತೆರೆಗೆ ಅಪ್ಪಳಿಸುವ ದಿನಗಳು ಸಮೀಪದಲ್ಲೆ ಇವೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Al these days Kannada actress Radhika's hubby name Kumaraswamy was open secret. Despite knowing it, preople were scared to mention this powerful politicians name. But Radhika herself has announced his name. She has her home banner movie 'Lucky' has been launched. The posters of movie 'Lucky, which his produced under her home banner, shows the producers name as Radhika Kumaraswamy.


Click it and Unblock the Notifications











