ತಿರುಪತಿಯಲ್ಲಿ ಕರುಳ ಕುಡಿಯೊಂದಿಗೆ ನಟಿ ರಂಭಾ

By Rajendra

ಇದೇ ವರ್ಷ ಜನವರಿ 14ರಂದು ಸಿನಿಮಾ ತಾರೆ ರಂಭಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ನೆನಪಿರಬಹುದು. ಕೆನಡಾದ ಟೊರೊಂಟೋದಲ್ಲಿ ತನ್ನ ಕರುಳ ಕುಡಿಗೆ ಜನ್ಮ ನೀಡಿದ್ದರು. ಇತ್ತೀಚೆಗೆ ಕುಟುಂಬ ಸಮೇತ ರಂಭಾ ತಿರುಪತಿಗೆ ಆಗಮಿಸಿ ತಿಮ್ಮಪ್ಪನ ದರ್ಶನಭಾಗ್ಯ ಪಡೆದರು.

ರಂಭಾ ಮದುವೆಯಾಗಿದ್ದು ಕೂಡ ತಿರುಪತಿಯಲ್ಲೆ. ಒಂದು ವರ್ಷ ತುಂಬುವುದರಲ್ಲೆ ತಿಮ್ಮಪ್ಪನ ಆಶೀರ್ವಾದದಿಂದ ರಂಭಾ ಮಡಿಲು ತುಂಬಿತ್ತು. ತಿಮ್ಮಪ್ಪನಿಗೆ ವಿಶೇಷ ಪೂಜೆಯನ್ನು ರಂಭಾ ಸಲ್ಲಿಸಿ ಕೃತಾರ್ಥರಾಗಿದ್ದಾರೆ. ಅವಕಾಶ ಸಿಕ್ಕಿದರೆ ಕುಟುಂಬ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸುವುದಾಗಿ ರಂಭಾ ತಿಳಿಸಿದ್ದಾರೆ.

ಅಂದಹಾಗೆ ರಂಭಾ ನವರಸ ನಾಯಕ ಜಗ್ಗೇಶ್ ಜೊತೆ 'ಸರ್ವರ್ ಸೋಮಣ್ಣ', ಕನಸುಗಾರ ರವಿಚಂದ್ರನ್ ಜೊತೆ 'ಓ ಪ್ರೇಮವೆ', ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಜೊತೆ 'ಭಾವ ಭಾವಮೈದ', ಸಾಹಸಸಿಂಹ ವಿಷ್ಣುವರ್ಧನ್ ಜೊತೆ 'ಸಾಹುಕಾರ', ರಸಿಕ ರವಿಚಂದ್ರನ್ ಜೊತೆಯಲ್ಲಿ 'ಪಾಂಡು ರಂಗ ವಿಠಲ', ಶಿವಣ್ಣ ಜೊತೆ 'ಗಂಡುಗಲಿ ಕುಮಾರರಾಮ', 'ಅನಾಥರು' ಚಿತ್ರದ ವಿಶೇಷ ಭೂಮಿಕೆಯಲ್ಲಿ ರಂಭಾ ಕನ್ನಡ ಚಿತ್ರ ರಸಿಕರ ಮನ ಗೆದ್ದಿದ್ದಾರೆ.

More from Filmibeat

English summary
Recently actress Rambha visits Tirumala Tirupati and she offered the Prayers. Rambha was blessed with a baby girl on 14th January 2011 at a private hospital in Toronto, Canada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X