ಅಂಬರೀಷ್‌ಗೆ ಮುಖ್ಯಮಂತ್ರಿ ಆಗುವ ಅವಕಾಶ
ರೆಬಲ್ ಸ್ಟಾರ್ ಅಂಬರೀಷ್ ಅವರಿಗೆ ನಿಜಜೀವನದಲ್ಲಿ ಸಾಧ್ಯವಾಗದ್ದು ತೆರೆಯ ಮೇಲೆ ಸಾಕಾರವಾಗುವ ಛಾನ್ಸ್ ಸಿಕ್ಕಿದೆ. 'ಸ್ವಯಂಕೃಷಿ' ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ಅಭಿನಯಿಸುವ ಅವಕಾಶ ಅಂಬಿಯನ್ನು ಹುಡುಕಿಕೊಂಡು ಬಂದಿದೆ. ಈ ಅವಕಾಶವನ್ನು ನೀಡಿದವರು 'ಸ್ವಯಂಕೃಷಿ' ನಿರ್ಮಾಪಕ ವೀರೇಂದ್ರ ಬಾಬು.
ಇದೊಂದು ಅತಿಥಿ ಪಾತ್ರವಾಗಿದ್ದು ಮುಖ್ಯಮಂತ್ರಿಗಳು ಬಿಲ್ಡರ್ ಒಬ್ಬನಿಗೆ 25,0000 ಕೋಟಿ ರು.ಗಳ ಪ್ರಾಜೆಕ್ಟ್ ಒಂದನ್ನು ಕೊಡುವ ಸನ್ನಿವೇಶವಿದೆ. ಈ ಪಾತ್ರದ ಬಗ್ಗೆ ಶೀಘ್ರದಲ್ಲೇ ಅಂಬರೀಷ್ ಬಳಿ ಚರ್ಚಿಸಲಾಗುತ್ತದೆ ಎಂದು ಚಿತ್ರದ ನಿರ್ದೇಶಕರೂ ಅಗಿರುವ ವೀರೇಂದ್ರ ಬಾಬು ತಿಳಿಸಿದ್ದಾರೆ.
'ಸ್ವಯಂಕೃಷಿ' ಚಿತ್ರ ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಈಗಾಗಲೆ ಚಿತ್ರದ ಧ್ವನಿಸುರುಳಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ ಎಂಬಸುದ್ದಿಯೂ ಇದೆ. ಚಿತ್ರದ ಹಾಡೊಂದರಲ್ಲಿ ಮುಮೈತ್ ಖಾನ್ ಸದ್ದಿಲ್ಲದಂತೆ ಕುಣಿದು ಹೋಗಿರುವುದು ಸಖತ್ ಸುದ್ದಿಯಾಗಿದೆ.
More from Filmibeat
English summary
Rebel Star Ambarish to play the Chief Minister role in Swayamkrishi. It is a guest role for Ambarish. It would be a great role for Ambarish, director-actor Veerendra Babu said to the media persons.


Click it and Unblock the Notifications











