ಅನುಷ್ಕಾ ಚೈತನ್ಯ ಕಣ್ಣು ಕಣ್ಣು ಕಲೆತ ಆ ಕ್ಷಣ
ಅಹಾ ಎಂಥಾ ಆ..ಕ್ಷಣ ನೆನೆದರೆ ತಲ್ಲಣ ವಾವ್ಹ್ ಎಂಥಾ ರೋಮ್ಯಾಂಟಿಕ್ ಸಾಂಗ್ ಅಲ್ವಾ.. ಆದ್ರೆ ಬೆಂಗಳೂರು ಬೆಡಗಿ ಅನುಷ್ಕಾಳಿಗೆ ಕೂಡಾ ಆ ರೀತಿ ಒಂದು ಕ್ಷಣ ಎದುರಿಸಬೇಕಾಯಿತು. ಯಾರನ್ನು ಅವಾಯ್ಡ್ ಮಾಡಬೇಕು ಎಂದು ಮನದಲ್ಲಿ ನೆನಯುತ್ತಿದಳೋ ಅವನು ಎದುರಲ್ಲೇ ಪ್ರತ್ಯಕ್ಷ ಕಣ್ಣು ಕಣ್ಣೂ ಕಲೆತಿದ್ದು ಒಂದು ಸೆಂಕೆಡುಗಳ ಕಾಲ ಮಾತ್ರ ಆಮೇಲೆ ಅವಳಲ್ಲಿ.. ಇವನಿಲ್ಲಿ ಮಾತಿಲ್ಲ ಕಥೆಯಿಲ್ಲ. ಈ ಸಿನಿಮೀಯ ಪ್ರಸಂಗ ನಡೆದಿದ್ದು ನಾಗ ಚೈತನ್ಯನನ್ನು ಅನುಷ್ಕಾ ಕಂಡಾಗ
58ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ಅನುಷ್ಕಾಳಿಗೆ ನಾಗಚೈತನ್ಯನ ಕಣ್ ತಪ್ಪಿಸಿ ಓಡಾಡುವುದೇ ಕಾಯಕವಾಗಿತ್ತು. ಎದುರು ಸಿಕ್ಕರೂ ಹಾಯ್ ಎಂದು ಹಲ್ಲುಕಿರಿಯದೆ ಕೊರಳನ್ನು ಬೇರೆಡೆ ತಿರುಗಿಸಿದ ಅನುಷ್ಕಾ ಅನಗತ್ಯವಾಗಿ ಗಾಸಿಪ್ ಹುಟ್ಟು ಹಾಕಿದವರ ಮೇಲೆ ಮನಸಲ್ಲೇ ಹಿಡಿ ಶಾಪ ಹಾಕುತ್ತಿದ್ದಳು.
ನಾಗ ಚೈತನ್ಯ ಕೂಡಾ ಅನುಷ್ಕಾಳನ್ನು ಮಾತನಾಡಿಸುವ ಗೋಜಿಗೆ ಹೋಗದೆ ಕಸಿನ್ ರಾಣಾ ದಗ್ಗುಬಾತಿ ಬಳಿ ಕುಳಿತುಕೊಂಡ. ಅನುಷ್ಕಾ ನಿರ್ದೇಶಕ ಕ್ರಿಶ್ ಇದ್ದ ಸಾಲಿನಲ್ಲಿ ಕೂತಳು. ಪರಸ್ಪರ ಸ್ನೇಹಿತರು ಈಗ ಅಪರಿಚಿತರಂತೆ ಬೇರೆಡೆ ಕೂತಿರುವುದನ್ನು ಕಂಡವರಲ್ಲಿ ಯಾರೂ ಏಕೆ ಏನು ಎಂದು ಪ್ರಶ್ನಿಸಲಿಲ್ಲ. ಯಾರು ಏನು ಕೇಳದಿದ್ದರೆ ಸಾಕು ಎಂಬ ಅನಿಸಿಕೆಯಲ್ಲಿದ್ದ ಅನುಷ್ಕಾಳಿಗೂ ಚೈತನ್ಯನನ್ನು ಮರೆತು ಪ್ರಶಸ್ತಿ ಸಮಾರಂಭ ನೋಡುವುದರಲ್ಲಿ ಮಗ್ನಲಾದಳು.
ಕಳೆದ ತಿಂಗಳು, ಅನುಷ್ಕಾ ಶೆಟ್ಟಿ ಹಾಗೂ ನಾಗಾರ್ಜುನ ಮಗ ನಾಗ ಚೈತನ್ಯರ ನಿಶ್ಚಿತಾರ್ಥ ಆಗಿದೆ ಎಂಬ ಗಾಳಿಸುದ್ದಿ ಹಬ್ಬಿತ್ತು. ಆಧಾರ ರಹಿತವಾದ ಈ ಸುದ್ದಿಯನ್ನು ತಕ್ಷಣವೇ ಅಲ್ಲಗೆಳೆದಿದ್ದ ಈ ಇಬ್ಬರು ತಾರೆಯರು ಮತ್ತೆ ಪರಸ್ಪರ ಭೇಟಿಯಾಗಲಿ, ಕಾಲ್, ಮೆಸೇಜ್ ಆಗಲಿ ಮಾಡಿರಲಿಲ್ಲ. ಅನುಷ್ಕಾಳಿಗಿಂತ ಕಿರಿಯನಾದ ಚೈತನ್ಯನಿಗೆ ಪಾಪ ಈ ಗಾಸಿಪ್ ಎಲ್ಲಾ ತುಂಬಾ ಹೊಸದು.


Click it and Unblock the Notifications











