ಡಿಸೆಂಬರ್ 15 ರಿಂದ ಅಂತಾರಾಷ್ಟ್ರೀಯ ಸಿನಿಮೋತ್ಸವ

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಿನಿಮೋತ್ಸವದ ಉದ್ಘಾಟನೆ ನೆರವೇರಲಿದ್ದು ಹಿರಿಯ ಕಲಾವಿದೆ ಬಿ ಜಯಶ್ರೀ ಅಭಿನಯಿಸಿರುವ ದಕ್ಷಿಣ ಆಫ್ರಿಕದ 'ಜುಲು' ಭಾಷೆಯ 'ಲಕ್ಕಿ' ಚಿತ್ರ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ.
ಈ ಸಿನಿಮೋತ್ಸವದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರಗಳು ಸೇರಿದಂತೆ ಒಟ್ಟು 179 ಚಿತ್ರಗಳು ಸ್ಪರ್ಧಾತ್ಮಕ, ಫೋಕಸ್, ಸಿಂಹಾವಲೋಕನ, ಹಳೆಯ ಸಿನಿಮಾ, ರಾಜಕೀಯ ಹಾಗೂ ಇತರ ವಿಭಾಗಗಳಲ್ಲಿ ಸ್ಪರ್ಧೆಗೆ ಪ್ರದರ್ಶನಗೊಳ್ಳಲಿವೆ. ಕನ್ನಡದಲ್ಲಿ 'ಬೆಟ್ಟದ ಜೀವ' ಸ್ಪರ್ಧೆಯಲ್ಲಿದೆ.
ಈ ಎಲ್ಲಾ ವಿಷಯಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಬಸವರಾಜು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ಹಾಗೂ ಸುಚಿತ್ರ ಫಿಲಂ ಸೊಸಾಯ್ಟಿಯ ನಿರ್ದೇಶಕ ಎಚ್ ಎನ್ ನರಹರಿರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Bengaluru International Film Festival starts from Dec. 15, 2011 at Bangalore. Celebrities Ananth Nag and Om Puri will be the Honorable Guests.


Click it and Unblock the Notifications











