»   » ಐಶ್ವರ್ಯ ರೈಗೆ ಹುಟ್ಟಲಿರುವ ಮಗು ಮೇಲೆ ಭಾರಿ ಬೆಟ್ಟಿಂಗ್

ಐಶ್ವರ್ಯ ರೈಗೆ ಹುಟ್ಟಲಿರುವ ಮಗು ಮೇಲೆ ಭಾರಿ ಬೆಟ್ಟಿಂಗ್

Posted By:
Subscribe to Filmibeat Kannada

ಕ್ರಿಕೆಟ್ ಬೆಟ್ಟಿಂಗ್ ನೋಡಿದ್ದೀವಿ, ಓದಿದ್ದೀವಿ ಕೇಳಿದ್ದೀವಿ. ಆದರೆ ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂಬ ಬಗ್ಗೆ ಬೆಟ್ಟಿಂಗ್ ಕಟ್ಟುವುದನ್ನು ಎಲ್ಲಾದರೂ ನೋಡಿದ್ದೀರಾ? ಈಗ ನಟಿ ಐಶ್ವರ್ಯ ರೈಗೆ ಹುಟ್ಟಲಿರುವ ಮಗುವಿನ ಲಿಂಗದ ಬಗ್ಗೆ ಭಾರಿ ಬೆಟ್ಟಿಂಗ್ ಶುರುವಾಗಿದೆ.

ಸದ್ಯಕ್ಕೆ ಈಗ ಹೇಳಿಕೊಳ್ಳುವಂತಹ ಯಾವುದೇ ಕ್ರಿಕೆಟ್ ಮ್ಯಾಚ್‌ಗಳಿಲ್ಲದಿರುವ ಕಾರಣ ಬುಕ್ಕಿಗಳ ಕಣ್ಣು ಐಶ್ವರ್ಯ ರೈ ಹೊಟ್ಟೆ ಮೇಲೆ ಬಿದ್ದಿದೆ. ಬೆಟ್ಟಿಂಗ್ ಮಾಫಿಯಾ ಜಾಲದ ಕೈಗಳು ಎಷ್ಟು ಉದ್ದ ಇದೆ ಎಂದರೆ, ಐಶ್ವರ್ಯ ರೈಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರವರೆಗೂ ಚಾಚಿದೆ ಎನ್ನುತ್ತವೆ ಮೂಲಗಳು.

ಐಶ್ವರ್ಯ ರೈ ಮೇಲೆ ಬೆಟ್ ಕಟ್ಟಲು ಮುಂಬೈ ಸೇರಿದಂತೆ ಭಾರತದ ಹಲವಾರು ನಗರಗಳಲ್ಲಿ ಈ ಜಾಲ ವಿಸ್ತರಿಸಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈಗಷ್ಟೆ ಐಶ್ವರ್ಯ ರೈ ಗರ್ಭಿಣಿ ಎಂಬುದು ಗೊತ್ತಾಗಿದೆ. ಹೆರಿಗೆ ಸಮಯ ಹತ್ತಿರವಾಗುತ್ತಿದ್ದಂತೆ ಇನ್ನೇನೇನು ಕಾದಿದೆಯೋ ಶಿವನೇ ಎಂದು ಜನ ತಲೆ ಚಚ್ಚಿಕೊಳ್ಳುವಂತಾಗಿದೆ. (ಏಜೆನ್ಸೀಸ್)

English summary
Bookies around the country have been investing huge money these days betting whether Aishwarya Rai Bachchan would be a boy or a girl. Days after Big B broke the news of daughter-in-law Aishwarya Rai Bachchan's pregnancy on micro-blogging site Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada