ಸೆಲೆಬ್ರಿಟಿ ಕ್ರಿಕೆಟ್ ಲೀಗ್ ವೇಳಾಪಟ್ಟಿ ಪ್ರಕಟ
ಅತ್ತ ಕ್ರಿಕೆಟ್ ಅಭಿಮಾನಿಗಳು ಇತ್ತ ಸಿನಿಮಾ ಭಕ್ತರು ಕಾತುರದಿಂದ ಎದುರು ನೋಡುತ್ತಿರುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ 4ರಂದು ಬೆಂಗಳೂರಿನಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ಕರ್ನಾಟಕ ಬುಲ್ಡೋಜರ್ ತಂಡ ಹಿಂದಿ ಸಿನಿಮಾ ತಾರೆಗಳೊಂದಿಗೆ ಸೆಣೆಸಲಿದೆ. ಜೂನ್ 12ರಂದು ಹೈದರಾಬಾದ್‌ನಲ್ಲಿ ಫೈನಲ್ಸ್.
ನೈಸ್ ಕಂಪನಿಯ ಮಾಲೀಕ ಅಶೋಕ್ ಖೇಣಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು 10 ವರ್ಷಗಳ ಅವಧಿಗೆ ರು.16.5 ಕೋಟಿಗೆ ಗುತ್ತಿಗೆ ತೆಗೆದುಕೊಂಡಿದ್ದಾರೆ. ಅವರೇ ತಂಡದ ಒಡೆಯ. ಈ ಹಿಂದೆ ಕರ್ನಾಟಕ ತಂಡಕ್ಕೆ 'ಬೆಂಗಳೂರು ರಾಯಲ್ಸ್' ಎಂದು ಹೆಸರಿಡಲಾಗಿತ್ತು. ಬಳಿಕ ಅದನ್ನು 'ಕರ್ನಾಟಕ ಬುಲ್ಡೋಜರ್ಸ್' ಎಂದು ಮರುನಾಮಕರಣ ಮಾಡಿದ್ದಾರೆ ಅಶೋಕ್ ಖೇಣಿ. ಮುಂಬೈ ಬಾಲಿವುಡ್ ತಂಡಕ್ಕೆ ನಾಯಕನಾಗಿರುವ ಸಲ್ಮಾನ್ ಖಾನ್ ಅವರ ತಂಡವನ್ನು ಮಣ್ಣುಮುಕ್ಕಿಸುವ ಶಪಥವನ್ನು ಖೇಣಿ ತೊಟ್ಟಿದ್ದಾರೆ.
ಸಿಸಿಎಲ್ ವೇಳಾಪಟ್ಟಿ ಹೀಗಿದೆ:
ಜೂನ್ 4: ತಮಿಳು Vs ತೆಲುಗು, ಸಮಯ: ಮಧ್ಯಾಹ್ನ 1 ಗಂಟೆ, ಸ್ಥಳ :ಬೆಂಗಳೂರು.
ಜೂನ್ 4: ತಮಿಳು Vs ತೆಲುಗು, ಸಮಯ: ಮಧ್ಯಾಹ್ನ 1ಗಂಟೆ, ಸ್ಥಳ: ಬೆಂಗಳೂರು
ಜೂನ್ 4: ಹಿಂದಿ Vs ಕನ್ನಡ, ಸಮಯ:ಸಂಜೆ 5 ಗಂಟೆ, ಸ್ಥಳ: ಬೆಂಗಳೂರು
ಜೂನ್ 5: ಕನ್ನಡ Vs ತಮಿಳು, ಸಮಯ: ಮಧ್ಯಾಹ್ನ 1 ಗಂಟೆ, ಸ್ಥಳ: ಚೆನ್ನೈ
ಜೂನ್ 5: ತೆಲುಗು Vs ಹಿಂದಿ, ಸಮಯ: ಸಂಜೆ 5 ಗಂಟೆ, ಸ್ಥಳ: ಚೆನ್ನೈ
ಜೂನ್ 11: ತಮಿಳು Vs ಹಿಂದಿ, ಸಮಯ: ಮಧ್ಯಾಹ್ನ 1 ಗಂಟೆ, ಸ್ಥಳ : ವಿಶಾಖಪಟ್ಟಣಂ
ಜೂನ್ 11: ಕನ್ನಡ Vs ತೆಲುಗು, ಸಮಯ: ಸಂಜೆ 5 ಗಂಟೆ, ಸ್ಥಳ: ವಿಶಾಖಪಟ್ಟಣಂ
ಜೂನ್ 12: ಫೈನಲ್ಸ್ , ಹೈದರಾಬಾದ್


Click it and Unblock the Notifications











