ಪೀಟರ್ ಹಗ್ ಜೊತೆ ಸೆಲೀನಾ ಜೇಟ್ಲಿ ರಹಸ್ಯ ಮದುವೆ
ಬೆಳ್ಳಿತೆರೆಯಿಂದ ನಾಪತ್ತೆಯಾಗಿದ್ದ ಕಾಬೂಲ್ ಸುಂದರಿ ಸೆಲೀನಾ ಜೇಟ್ಲಿ ಈಗ ಇದ್ದಕ್ಕಿಂದ್ದಂತೆ ಸುದ್ದಿ ಮಾಡಿದ್ದಾರೆ. ದುಬೈ ಮೂಲಕ ಹೋಟೆಲ್ ಉದ್ಯಮಿ ಪೀಟರ್ ಹಗ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನುತ್ತವೆ ಮೂಲಗಳು. ಇವರಿಬ್ಬರೂ ಕೈಕೈಹಿಡಿದುಕೊಂಡು ಒಟ್ಟಿಗೆ ಕಾಣಿಸಿಕೊಂಡಿದ್ದೇ ಈ ಸುದ್ದಿ ಹಬ್ಬಲು ಕಾರಣವಾಗಿದೆ.
ತಾವಿಬ್ಬರು ಮದುವೆಯಾಗಿರುವ ವಿಚಾರವನ್ನು ಸೆಲೀನಾ ಅಲ್ಲಗಳೆದಿದ್ದಾರೆ. ಕಳೆದ ವರ್ಷ ದುರ್ಗಾ ಪೂಜೆ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು. ಆದರೆ ಮದುವೆ ಮಾತ್ರ ಸದ್ಯಕ್ಕಿಲ್ಲ ಎನ್ನುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಆಕೆಯ ತಮ್ಮನ ಮದುವೆಯಿದೆಯಂತೆ. ಪೀಟರ್ ಅಜ್ಜಿಯ ಆರೋಗ್ಯ ಹದಗೆಟ್ಟಿದೆಯಂತೆ. ಇವೆಲ್ಲಾ ಅಡ್ಡಿ ಆತಂಕಗಳು ದೂರವಾದ ಬಳಿಕಷ್ಟೆ ಮದುವೆ ಎನ್ನುತ್ತಿದ್ದಾರೆ ಸೆಲೀನಾ.
ಆಕೆ ಅಭಿನಯದ ನಾಲ್ಕು ಚಿತ್ರಗಳು ಇನ್ನೂ ತೆರೆಕಂಡಿಲ್ಲವಂತೆ. ಆ ಚಿತ್ರಗಳಿಗೆಲ್ಲಾ ಒಂದು ಗತಿ ಕಾಣಿಸಿದ ಬಳಿಕವಷ್ಟೆ ಗಟ್ಟಿಮೇಳ ಎಂದು ಮತ್ತೆ ಅದೇ ಓಲ್ಡ್ ಡೈಲಾಗ್ ಹೊಡೆದಿದ್ದಾರೆ. ಅಂದಹಾಗೆ ಸೆಲೀನಾ ಕನ್ನಡದ 'ಶ್ರೀಮತಿ' ಚಿತ್ರದಲ್ಲಿ ಅಭಿನಯಿಸಿರುವುದು ಗೊತ್ತೇ ಇದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











