»   » ಡಾ.ರಾಜ್ ಹೆಸರಿನಲ್ಲಿ ಚಲನಚಿತ್ರ ವಿವಿಗೆ ಭರವಸೆ

ಡಾ.ರಾಜ್ ಹೆಸರಿನಲ್ಲಿ ಚಲನಚಿತ್ರ ವಿವಿಗೆ ಭರವಸೆ

Subscribe to Filmibeat Kannada

ಬೆಂಗಳೂರು, ಅ. 6 :ವರನಟ ಡಾ. ರಾಜ್ ಕುಮಾರ್ ಹೆಸರಿನಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಫಿಲಂ ಕಾಂಪ್ಲೆಕ್ಸ್ ನಿರ್ಮಾಣ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೈದರಾಬಾದ್ ಮಾದರಿಯಲ್ಲಿಯೇ ಬೆಂಗಳೂರು ಅಥವಾ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಫಿಲಂ ಕಾಂಪ್ಲೆಕ್ಸ್ ಆರಂಭಿಸುವ ಸಂಬಂಧಿಸಿದಂತೆ ಪರಿಶೀಲನೆ ನಡೆದಿದೆ. ಖಾಸಗಿಯವರು ಮುಂದೆ ಬಂದರೆ ಅವರಿಗೆ ವಹಿಸಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ರಜತ ಮಹೋತ್ಸವ ಹಾಗೂ 2007ನೇ ಸಾಲಿನ ಪ್ರಶಸ್ತಿಗಳನ್ನು ಚಲನಚಿತ್ರ ರಂಗದ ಹಲವು ಗಣ್ಯರಿಗೆ ಪ್ರದಾನ ಮಾಡಲಾಯಿತು.

ಡಾ. ರಾಜ್ ಕುಮಾರ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ 5 ಕೋಟಿ ರುಪಾಯಿ ಖರ್ಚು ಮಾಡಲಿದ್ದು, ಈಗಾಗಲೇ ಒಂದು ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಚಲನಚಿತ್ರ ಅದಾಡೆಮಿ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ. ಮುಂದಿನ ಬಜೆಟ್ ನಲ್ಲಿ ಚಿತ್ರೋದ್ಯಮಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ರಾಜ್ ಸಮಾಧಿಯಲ್ಲಿ ಶೀಘ್ರವೇ ಸ್ಮಾರಕ ನಿರ್ಮಾಣ
ಡಾ. ರಾಜ್ ಸ್ಮಾರಕ ನಿರ್ಮಾಣಕ್ಕೆ ಟೆಂಡರ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada