ದರ್ಶನ್ ಚಿಂಗಾರಿ ಶೂಟಿಂಗ್ ಕಂಪ್ಲೀಟ್: ತೆರೆಗೆ ರೆಡಿ

ಮಹಾದೇವ್ ಹಾಗೂ ಮನು ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಸೂರ್ಯಕಾಂತಿ ನಂತರ ಖ್ಯಾತ ಕೊರಿಯೋಗ್ರಾಫರ್ ಎ ಹರ್ಷ ನಿರ್ದೇಶನದ ಚಿತ್ರ ಇದು. ಈ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ದೀಪಿಕಾ ಕಾಮಯ್ಯ ಇದ್ದಾರೆ. ದರ್ಶನ್ ಜೊತೆಯಲ್ಲಿ ಇರುವ ಇತರ ಪ್ರಮುಖರೆಂದರೆ ಯಶಸ್ ಸೂರ್ಯ, ಪ್ರದೀಪ್, ಸೃಜನ್ ಲೋಕೇಶ್ ಹಾಗೂ ರಮೇಶ್ ಭಟ್.
ಬರುವ ವರ್ಷ, ಜನವರಿ 2, 2012 ರಂದು ಆಡಿಯೋ ಬಿಡುಗಡೆ ಹಾಗೂ ಜನವರಿ 27 ರಂದು ಚಿತ್ರದ ಬಿಡುಗಡೆ ಎಂದು ನಿರ್ಧಾರವಾಗಿದೆ. ಹಾಡುಗಳೂ ಕೂಡ ಒಂದಕ್ಕಿಂತ ಒಂದು ಭಿನ್ನವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಯೋಗರಾಜ್ ಭಟ್ ಒಂದು ಹಾಡನ್ನು ಬರೆದಿದ್ದಾರೆ, ಅದಕ್ಕೆ ದರ್ಶನ್ ಚೆನ್ನಾಗಿ ಕುಣಿದಿದ್ದಾರೆ ಎನ್ನಲಾಗಿದೆ. ಈಗಿನಿಂದಲೇ ಚಿಂಗಾರಿಗೆ ಜನ ಕಾಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Challenging Star Darshan upcoming movie Chingari. All Pre-production works completed and post production going on. Its audio release is on Jan. 02, 2012 and movie release on Jan. 27, 2012.


Click it and Unblock the Notifications











