ನಿರ್ದೇಶಕ ನಾಗಾಭರಣರಿಂದ ಮತ್ತೆ ನಾಗಮಂಡಲ!

ನಾಗಾಭರಣ ಅವರು ತಮ್ಮ ಮನೆಯಲ್ಲಿ ನಾಗಮಂಡಲ ಪೂಜೆ ಮಾಡಿಸಿದ್ದಾರೆ. ದೊಡ್ಡ ಪೆಂಡಾಲ್ ಹಾಕಿ, ಮನೆಯನ್ನು ಹಸಿರು ತೋರಣಗಳಿಂದ ಸಿಂಗರಿಸಿ ಬಹಳ ಅದ್ಧೂರಿಯಾಗೆ ಕಾರ್ಯಕ್ರಮ ನಡೆಸಿದ್ದಾರೆ ನಾಗಾಭರಣ. ಇದೇ ಡಿಸೆಂಬರ್ 2ರಂದು ನಡೆದ ಈ ಪೂಜೆಯಲ್ಲಿ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿದ್ದರು.
ಚಿತ್ರರಂಗದಲ್ಲಿ ಎದುರಾಗುವ ಕಷ್ಟಗಳು ಮಂಜಿನಂತೆ ಕರಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಮನೆಯಲ್ಲಿ ನಾಗಮಂಡಲ ಪೂಜೆ ಮಾಡಿಸಿದ್ದಾರಂತೆ. ಒಟ್ಟಿನಲ್ಲಿ ನಾಗಮಂಡಲ ಚಿತ್ರ ಹಿಟ್ಆಗಿತ್ತು. ಈಗ ಮಾಡಿಸಿರುವ ಪೂಜೆಯಿಂದ ಸ್ಯಾಂಡಲ್ ವುಡ್ ಚಿತ್ರಗಳೆಲ್ಲಾ ಹಿಟ್ ಆದರೆ ಒಳ್ಳೆಯದು. (ಒನ್ ಇಂಡಿಯಾ ಕನ್ನಡ)
More from Filmibeat
English summary
Director Nagabharana performed Nagamandala Pooja in his house for Sandalwood Success.


Click it and Unblock the Notifications











