ಜರಾಸಂಧ ಈ ವಾರ ಬರ್ತಿಲ್ಲ ಏಕೆ, ಓವರ್ ಟು ಶಶಾಂಕ್

By Mahesh

ಚಿತ್ರಮಂದಿರ ಸಿಗಲಿಲ್ಲ ಎಂದು ಸಿನಿಮಾ ರಿಲೀಸ್ ಮುಂದಕ್ಕೆ ಹಾಕುವುದನ್ನು ನೋಡಿರುತ್ತೀರಿ. ಆದರೆ, ಚಿತ್ರಕ್ಕೆ ಪ್ರಚಾರ ಕಮ್ಮಿಯಾಯ್ತು ಇನ್ನೊಂದು ವಾರ ಬಿಟ್ಟು ರಿಲೀಸ್ ಮಾಡೋಣ ಅಂದವರನ್ನು ನೋಡಿರೋದು ಕಮ್ಮಿ.

ಯಶಸ್ವಿ ನಿರ್ದೇಶಕ ಶಶಾಂಕ್ ಅವರು ತಮ್ಮ ಬಹು ನಿರೀಕ್ಷೆಯ ಚಿತ್ರ 'ಜರಾಸಂಧ' ಮತ್ತೊಂದು ವಾರಕ್ಕೆ ಮುಂದೂಡಿದ್ದಾರೆ. ನ.11ರ ಬದಲಾಗಿ ನ.18ರಂದು ಜರಾಸಂಧ ತೆರೆಗೆ ಅಪ್ಪಳಿಸಲಿದ್ದಾನೆ.

ಫಿಲ್ಮಂ ರಿಲೀಸ್ ಯಾಕೆ ಲೇಟ್ ಎಂದರೆ ಮೊದಲಿಗೆ ಸೆನ್ಸಾರ್ ಸಟಿಫಿಕೇಟ್ ಸಿಕ್ಕಿಲ್ಲ, ಕೆಲ ತಾಂತ್ರಿಕ ತೊಂದರೆಗಳಿವೆ ಸರಿಪಡಿಸಬೇಕು ಎಂದು ಶಶಾಂಕ್ ಹೇಳಿದ್ದರು.

ಬಹುಶಃ ಸೋಮವಾರ ಮೊದಲ ಪ್ರಿಂಟ್ ಕೈಸೇರಲಿದೆ. ಆಮೇಲೆ ನಾಯಕ ದುನಿಯಾ ವಿಜಯ್, ಪ್ರಣೀತಾ ಸೇರಿದಂತೆ ಚಿತ್ರತಂಡಕ್ಕೆ ವಿಶೇಷ ಪ್ರದರ್ಶನ ಏರ್ಪಡಿಸಲಾಗುವುದು ಎಂಖದು ಶಶಾಂಕ್ ತಿಳಿಸಿದರು.

ಇದಕ್ಕೂ ಮುಖ್ಯ ಕಾರಣ ಎಂದರೆ, ಚಿತ್ರಕ್ಕೆ ಸರಿಯಾದ ಪ್ರಚಾರ ಇನ್ನೂ ಸಿಕ್ಕಿಲ್ಲ, ಅಫ್ ಕೋರ್ಸ್ ಚಿತ್ರದ ಹಾಡುಗಳು ನಿಧಾನವಾಗಿ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಆದರೆ, ಚಿತ್ರಕ್ಕೆ ಸರಿಯಾಗಿ ಪ್ರಚಾರ ನೀಡಲು ಇನ್ನೂ ಒಂದು ವಾರವಾದರೂ ಬೇಕು ಎಂದು ಶಶಾಂಕ್ ಅಭಿಪ್ರಾಯಪಟ್ಟಿದ್ದಾರೆ.

ರೋಚಕ ಸಾಹಸ ದೃಶ್ಯಗಳನ್ನು ಹೊಂದಿರುವ ಜರಾಸಂಧದಲ್ಲಿ ದುನಿಯಾ ವಿಜಯ್ ಪಾತ್ರ ಎಲ್ಲರಿಗೂ ಮೆಚ್ಚುಗೆಯಾಗಲಿದೆ ಎಂಬ ವಿಶ್ವಾಸವನ್ನು ಶಶಾಂಕ್ ವ್ಯಕ್ತಪಡಿಸಿದರು. ಜರಾಸಂಧ ಹತ್ತರಲ್ಲಿ ಇನ್ನೊಂದು ಚಿತ್ರವಾಗದೆ ಬ್ಲ್ಯಾಕ್ ಕೋಬ್ರಾ ವಿಜಯ್ ಗೆ ಹೊಸ ದಾರಿ ತೋರಿಸಲಿದೆ ಎಂದು ಅಭಿಮಾನಿಗಳೂ ನಂಬಿದ್ದಾರೆ.

More from Filmibeat

English summary
Kannada Cinema Jarasandha release date is postponed to Nov.18. Movie has Duniya Vijay and Praneetha in the lead and directed by Shashank.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X