ಅಂಬಿಗೆ ಫಿಲಂಫೇರ್ ಜೀವಮಾನ ಸಾಧನೆ ಪ್ರಶಸ್ತಿ

By Rajendra

ಕಲಿಯುಗ ಕರ್ಣ ,ಮಳವಳ್ಳಿ ಗಂಡು , ರೆಬೆಲ್ ಸ್ಟಾರ್, ಎಂಎಚ್ ಅಮರನಾಥ್ ಉರುಫ್ ಅಂಬರೀಷ್ ಅವರು ಫಿಲಂಫೇರ್ ಜೀವಮಾನ ಸಾಧನೆ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿಯನ್ನು ಶುಕ್ರವಾರ ಚೆನ್ನೈನಲ್ಲಿ ಪ್ರಕಟಿಸಲಾಗಿದೆ. ಈ ಸುದ್ದಿಯನ್ನು ತಿಳಿದ ತಕ್ಷಣ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರದ ಅಂಬರೀಷ್ ಅಭಿಮಾನಿಗಳು ಸಿಹಿ ಹಂಚಿಕೊಂಡು ಸಂಭ್ರಮಿಸಿದರು ಎಂದು ಚೆನ್ನೈನ ನಮ್ಮ ಬಾತ್ಮಿದಾರ ದಟ್ಸ್ ಕನ್ನಡಕ್ಕೆ ತಿಳಿಸಿದರು.

ಮೂವತ್ತೊಂಬತ್ತು ವರ್ಷಗಳಿಂದ ಚಿತ್ರರಂಗದಲ್ಲಿರುವ ಅಂಬರೀಷ್ ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ನಟಿಸಿರುವುದು ವಿಶೇಷ. ಅಂಬರೀಷ್ ಅವರಿಗೆ ಫಿಲಂ ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಬಂದಿರುವುದಕ್ಕೆ ಅವರ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಸದ್ಯಕ್ಕೆ 'ವೀರ ಪರಂಪರೆ' ಚಿತ್ರದಲ್ಲಿ ಅಂಬರೀಶ್ ಅಭಿನಯಿಸುತ್ತಿದ್ದಾರೆ. ಈ ವರ್ಷ ಅಂಬಿ ಅಭಿನಯದ ಒಂದೇ ಒಂದು ಚಿತ್ರ 'ತಿಪ್ಪ್ಪಾರಳ್ಳಿ ತರ್ಲೆಗಳು' ಬಿಡುಗಡೆ ಕಂಡಿತ್ತು. ಅಂಬರೀಷ್ ಅವರಿಗೆ ಈ ಪ್ರಶಸ್ತಿ ಒಲಿದಿರುವುದು ಅವರ ಸಾಧನೆಗೆ ಕನ್ನಡಿ ಹಿಡಿದಂತಾಗಿದೆ. ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿರುವ ಅಂಬರೀಷ್ ಅವರಿಗೆ ಶುಭಾಶಯಗಳು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X