ಜೂನಿಯರ್ ಎನ್ಟಿಆರ್ ಅಂಗಿ ಬೆಲೆ ರು.20 ಲಕ್ಷ!
ತೆಲುಗು ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಮದುವೆ ಈಗಾಗಲೆ ಸಾಕಷ್ಟು ಸುದ್ದಿಯಾಗಿದೆ. ಲಕ್ಷ್ಮಿ ಪ್ರಶಾಂತಿ ಎಂಬ ಕನ್ಯೆಯ ಕೈಹಿಡಿಯುತ್ತಿರುವ ಎನ್ಟಿಆರ್ ಮದುವೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ವರದಕ್ಷಿಣೆ ಎಂದು ಈಗಾಗಲೆ ರು.500 ಕೋಟಿ ತೆಗೆದುಕೊಂಡಿರುವ ಸುದ್ದಿ ಬೇರೆ ಇದೆ.
ಈಗ ರು.20 ಲಕ್ಷಗಳಲ್ಲಿ ಅಂಗಿ ಹೊಲಿಸುತ್ತಿದ್ದಾನೆ ಈ ಪುಣ್ಯಾತ್ಮ. ಅದು ಅಂತಿಂಥ ಅಂಗಿ ಅಲ್ಲ ಚಿನ್ನದ ಅಂಗಿ! ವಿಶೇಷ ಎಂದರೆ ಈ ಅಂಗಿಯನ್ನು ಸಿದ್ಧಪಡಿಸುತ್ತಿರುವುದು ಬೆಂಗಳೂರಿನ ದರ್ಜಿಗಳು. ಶೀಘ್ರದಲ್ಲೆ ಈ ವಿಶೇಷ ಅಂಗಿಯನ್ನು ನೊವಾಟೆಲ್ ಹೋಟೆಲ್ ನಲ್ಲಿ ಜೂನಿಯರ್ ಎನ್ಟಿಆರ್‌ಗೆ ಹಸ್ತಾಂತರಿಸಲಿದ್ದಾರೆ.
ಜೂನಿಯರ್ ಎನ್ಟಿಆರ್ ಮದುವೆ ನವೆಂಬರ್ 18ಕ್ಕೆ ನಿಗದಿಯಾಗಿದೆ. ಈತ ಮದುವೆಯಾಗುತ್ತಿರುವ ಲಕ್ಷ್ಮಿ ಪ್ರಶಾಂತಿ ಇನ್ನೂ ಅಪ್ರಾಪ್ತ ಬಾಲಕಿ ಎಂಬ ಕಾರಣಕ್ಕೆ ವಿವಾದ ತಲೆಯೆತ್ತಿತ್ತು. ಆಕೆಯ ಮದುವೆ ಕಾನೂನು ಬಾಹಿರವಾಗುತ್ತದೆ ಎಂದು ಆರೋಪಿಸಿ ಶಾಂತಿ ಪ್ರಸಾದ್ ಎಂಬ ವಕೀಲರೊಬ್ಬರು ಈ ಹಿಂದೆ ಮಚಲಿಪಟ್ಟಣಂ ಲೀಗಲ್ ಸರ್ವಿಸ್ ಅಥಾರಿಟಿ ಮೆಟ್ಟಿಲೇರಿದ್ದರು.
ಮದುವೆ ಜೂನಿಯರ್ ಎನ್ಟಿಆರ್ ಚಿನ್ನದ ಅಂಗಿ ವರದಕ್ಷಿಣೆ ಲಕ್ಷ್ಮಿ ಪ್ರಶಾಂತಿ jnr ntr wedding lakshmi pranathi golden shirt


Click it and Unblock the Notifications