ಬ್ಯಾಂಕಾಕ್ ನಲ್ಲಿ 'ಗನ್' ಆನಂದ ಆನಂದ ಆನಂದವೇ
ಮುರಳಿ ಅವರೊಂದಿಗೆ ಹರೀಶ್‌ರಾಜ್ ನಿರ್ಮಿಸುತ್ತಿರುವ 'ಗನ್' ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗಿದೆ. ಚಿತ್ರಕ್ಕೆ ಈವರೆಗೂ ಮೂವತ್ತೈದು ದಿನಗಳ ಚಿತ್ರೀಕರಣ ನಡೆದಿದೆ. ಆಗಸ್ಟ್ ಮೊದಲವಾರದಲ್ಲಿ ಹಾಡುಗಳ ಚಿತ್ರೀಕರಣ ಆರಂಭವಾಗಲಿದ್ದು ಒಂದು ಗೀತೆಯ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕರೂ ಆಗಿರುವ ಹರೀಶ್‌ರಾಜ್ ತಿಳಿಸಿದ್ದಾರೆ.
ಎಚ್.ಎಮ್.ರಾಮಚಂದ್ರ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ರಾನಿ ರಾಫಲ್ ಅವರ ಸಂಗೀತವಿರುವ 'ಗನ್' ಚಿತ್ರದ ನಾಯಕನಾಗಿ ಹರೀಶ್‌ರಾಜ್ ನಟಿಸಿದ್ದಾರೆ. ವಿಭಿನ್ನ ಕಥಾಹಂದರವುಳ್ಳ ಈ ಚಿತ್ರದ ನಾಯಕಿ ಮಲ್ಲಿಕಾಕಪೂರ್.
ಚಿತ್ರದ ಉಳಿದ ತಾರಾಬಳಗದ ಪಟ್ಟಿ ಹೀಗಿದೆ; ಹರೀಶ್‌ರಾಜ್, ಮಲ್ಲಿಕಾಕಪೂರ್, ರಂಗಾಯಣರಘು ಸುಂದರಶ್ರೀ, ಸಂಗೀತಾ, ಮೋಹನ್‌ಜುನೆಜಾ, ಪಿ.ಎನ್.ಸತ್ಯ, ಬುಲೆಟ್‌ಪ್ರಕಾಶ್. ಹರೀಶ್‌ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ.
More from Filmibeat
ಗನ್ ಹರೀಶ್ ರಾಜ್ ಮಲ್ಲಿಕಾ ಕಪೂರ್ ರಚನಾ ಮೌರ್ಯ ಕಲಾಕಾರ್ ರಂಗಾಯಣ ರಘು ಬ್ಯಾಂಕಾಕ್ gun harish raj mallika kapoor rachana mourya rangayana raghu


Click it and Unblock the Notifications











