ಶಿವ ಸಿನಿಮಾದ ಬಗ್ಗೆ ಶಿವರಾಜ್ ಕುಮಾರ್ ಹೇಳಿಕೆ
ಈ ಮಾತು ಖ್ಯಾತ ಕನ್ನಡ ನಟನೊಬ್ಬನ ಮಾತು. ಅದೂ ಅವರ ನೂರನೆಯ ಸಿನಿಮಾ ಜೋಗಯ್ಯನ ಬಗ್ಗೆ. ನಿಮಗೆ ಅರ್ಥವಾಗಿರಬೇಕು, ಇದು ಶಿವರಾಜ್ ಕುಮಾರ್ ಹೇಳಿದ್ದು. "ಒಂದಂತೂ ನಿಜ, ನನ್ನ ನೂರನೆಯ ಸಿನಿಮಾದ ನಿರೀಕ್ಷೆಯನ್ನು 'ಶಿವ' ಫುಲ್ ಫಿಲ್ ಮಾಡುತ್ತಾನೆ." ಹೀಗೆ ಶಿವ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟಿದ್ದಾರೆ, ಸ್ವತಃ ಶಿವರಾಜ್ ಕುಮಾರ್.
ಶಿವರಾಜ್ ಕುಮಾರ್ ಜೊತೆ ನಾಯಕಿಯಾಗಿ ರಾಗಿಣಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ಶಿವಣ್ಣನ ಬಹುನಿರೀಕ್ಷಿತ ನೂರನೆಯ ಚಿತ್ರ ಜೋಗಯ್ಯ ನೆಲಕಚ್ಚಿದ್ದು ಶಿವಣ್ಣನಾದಿಯಾಗಿ ಎಲ್ಲರಿಗೂ ಬೇಸರ ತಂದಿದೆ. ಆದರೆ ಆ ಚಿತ್ರವನ್ನು ಮರೆತು ಬಿಡಿ, ಶಿವ ಅದನ್ನು ಪೂರೈಸುತ್ತದೆ ಎಂದಿದ್ದಾರೆ ಶಿವಣ್ಣ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೂರು ಸಿನಿಮಾಗಳನ್ನು ದಾಟಿ ಮುನ್ನಡೆದಿದ್ದಾರೆ. ಕೇವಲ ಒಂದೆರಡು ಸಿನಮಾಗಳಿಗೇ ಸುಸ್ತಾಗಿ ಇಂಡಸ್ಟ್ರಿಯಿಂದಲೇ ಔಟ್ ಆಗುವ ಬಹಳಷ್ಟು ನಾಯಕನಟರ ನಡುವೆ ಈ ಸಾಧನೆ ಅತ್ಯದ್ಭುತ ಎನಿಸುತ್ತದೆ. ಅವರ ಅಪ್ಪಾಜಿ, ಕನ್ನಡದ ಅಣ್ಣಾವ್ರರಂತೆ ಶಿವಣ್ಣ ಕೂಡ 200 ಸಿನಿಮಾ ದಾಟಲಿ ಎಂಬ ಹಾರೈಕೆ ಕನ್ನಡಿಗರೆಲ್ಲರದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











