ಪ್ಯಾರಿಸ್‌ನಿಂದ ಬೆಂಗಳೂರಿಗೆ ಮರಳಿದ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪ್ಯಾರಿಸ್ ಟ್ರಿಪ್ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ. "ನಾನು ಆರೋಗ್ಯವಾಗಿದ್ದೇನೆ. ವರಿ ಮಾಡುವಂತಹದ್ದೇನು ಆಗಿಲ್ಲ. ಭರಣಿ ಮಿಲ್ಸ್ ನಿರ್ಮಿಸುತ್ತ್ತಿರುವ 'ಲಕ್ಷ್ಮಿ' ಚಿತ್ರೀಕರಣದಲ್ಲಿ ಜುಲೈ 16ರಿಂದ ಪಾಲ್ಗೊಳ್ಳಲಿದ್ದೇನೆ " ಎಂದಿದ್ದಾರೆ.
ಜುಲೈ 12ರಂದು ಶಿವಣ್ಣ 50ನೇ ವಸಂತಕ್ಕೆ ಅಡಿಯಿಡುತ್ತಿದ್ದಾರೆ. ಅವರು ಈಗ ಮಾಗಿದ ಕಲಾವಿದ. ಜೋಗಯ್ಯನಾಗಿ ಶಿವಣ್ಣ ಈ ವರ್ಷ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರೋದ್ಯಮದಲ್ಲಿ ಜೋಗಯ್ಯ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ತಮಸ್ಸು ಚಿತ್ರಕ್ಕೆ ಈ ಬಾರಿ ಫಿಲಂಫೇರ್ ಪ್ರಶಸ್ತಿ ಬಂದಿರುವುದು ಶಿವಣ್ಣನ ಮೇಲಿನ ನಿರೀಕ್ಷೆಗಳು ಹೆಚ್ಚಿಸಿವೆ.
ಹೈದರಾಬಾದ್‌ನಲ್ಲಿ ನಡೆದ ಫಿಲಂಫೇರ್ ಪ್ರಶಸ್ತಿಯನ್ನು ಶಿವಣ್ಣನ ಪರವಾಗಿ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಘವೇಂದ್ರ ಪ್ರಶಸ್ತಿ ಸ್ವೀಕರಿಸಿದ್ದರು. ವರನಟ ಡಾ.ರಾಜ್ ಕುಮಾರ್ ಮೊಮ್ಮಗ ವಿನಯ್ ಬಣ್ಣದ ಲೋಕಕ್ಕೆ ಅಡಿಯಿಡುವ ದಿನಗಳು ದೂರವಿಲ್ಲ. ಇವೆಲ್ಲಾ ಸಂಭ್ರಮಗಳು ಶಿವಣ್ಣನನ್ನು ಮತ್ತಷ್ಟು ಗೆಲುವಾಗಿಸಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











