twitter
    For Quick Alerts
    ALLOW NOTIFICATIONS  
    For Daily Alerts

    ಅಮಿತಾಬ್ ಜತೆ ನಟಿಸಬೇಕೆಂಬ ಆಸೆ: ಶಿವಣ್ಣ

    By Staff
    |

    I am a big fan of Amitabh Bachchan : Shivrajkumar
    ಶನಿವಾರ(ಏಪ್ರಿಲ್ 4) ಸಂಜೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ 'ಅಮೃತ ಮಾತು ಮಥನ' ದಲ್ಲಿ ನಟ ಶಿವರಾಜ್ ಕುಮಾರ್ ಮನಬಿಚ್ಚಿ ಮಾತನಾಡಿದರು. ತಮ್ಮ ಜೀವನಾನುಭವಗಳನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು. ತನ್ನದೇ ಆದ ನಟನಾ ಶೈಲಿಯನ್ನು ಅವರು ಹೊಂದಿದ್ದರೂ ನಟ ಸಾರ್ವಭೌಮ ರಾಜ್ ಕುಮಾರ್ ಪ್ರಭಾವವೂ ಸಾಕಷ್ಟಿದೆ. ಶಿವರಾಜ್ ಕುಮಾರ್ ಬಂದಹಾದಿಯಲ್ಲಿ ಒಮ್ಮೆ ಹಿಂತಿರುಗಿ ನೋಡಿದಾಗ...

    *ನಾನು 12 ವರ್ಷದವನಾಗಿದ್ದಾಗ ಉತ್ತಮ ಕ್ರಿಕೆಟರ್ ಆಗಿದ್ದೆ. ಭಾರತ ಕ್ರಿಕೆಟ್ ತಂಡ ಸೇರಬೇಕೆಂದು ಕನಸು ಕಂಡಿದ್ದೆ. ಆದರೆ ಯಾವುದೇ ಶಿಫಾರಸು ಇಲ್ಲದ ಕಾರಣ ಆಯ್ಕೆಯಾಗಲಿಲ್ಲ.
    *40 ಸದಸ್ಯರಿದ್ದ ಅವಿಭಕ್ತ ಕುಟುಂಬ ನಮ್ಮದು. ನಮ್ಮ ಮನೆ ಹಕ್ಕಿ ಗೂಡಿನಂತೆ ಇತ್ತು.
    *ಆರಂಭದಲ್ಲಿ ನನಗೆ ಕನ್ನಡ ಗೊತ್ತಿರಲಿಲ್ಲ. ಚಿತ್ರಕತೆಗಳ ಬಗ್ಗೆ ಚರ್ಚಿಸುತ್ತಾ ಕಲಿತೆ.
    *ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ರ ದೊಡ್ಡ ಅಭಿಮಾನಿ ನಾನು. ಅಮಿತಾಬ್ ಜತೆ ನಟಿಸಬೇಕು ಎಂಬುದು ನನ್ನ ಕನಸು.
    *ಅಮೃತ ಮಹೋತ್ಸವದ ಕೆಟ್ಟ ನಿರ್ವಹಣೆಯಿಂದ ನನಗೂ ಬೇಸರವಾಗಿದೆ.
    *ರಾಜಕೀಯದಲ್ಲಿ ನಂಬಿಕೆ ಇಲ್ಲ. ರಾಜಕೀಯ ನಮ್ಮ ಕುಟುಂಬದ ಭಾಗವೂ ಅಲ್ಲ.

    ರಾಜ್ ಕುಮಾರ್ ಬಗ್ಗೆ
    *ಆರಂಭದಲ್ಲಿ ಅಪ್ಪಾಜಿ ಅವರೇ ನನ್ನ ಸಿನಿಮಾಗಳಿಗೆ ಚಿತ್ರಕತೆ ಆಯ್ಕೆ ಮಾಡುತ್ತಿದ್ದರು.
    *ಶ್ರೀಕೃಷ್ಣದೇವರಾಯ, ಬಂಗಾರದ ಮನುಷ್ಯ, ಭಕ್ತ ಕುಂಬಾರ, ಎರಡು ಕನಸು, ಕಸ್ತೂರಿ ನಿವಾಸ ಮತ್ತು ಆಕಸ್ಮಿಕ ಇವು ಅಪ್ಪಾಜಿ ನಟಿಸಿದ ನನ್ನ ಮೆಚ್ಚಿನ ಚಿತ್ರಗಳು.
    *ಅಪ್ಪಾಜಿ ಮನೆ ಒಂದು ರೀತಿಯಲ್ಲಿ ಚರ್ಚು, ಮಸೀದಿ, ಗುರುದ್ವಾರ ಮತ್ತು ಮಂದಿರ ಎಲ್ಲವೂ ಆಗಿತ್ತು.

    (ದಟ್ಸ್ ಕನ್ನಡ ಚಿತ್ರವಾರ್ತೆ)

    ಇದನ್ನೂ ಓದಿ
    ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ
    ಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ
    ಶಿವಣ್ಣನಿಗೆ ಹೊಸ ತಂಗಿಯಾಗಿ ಮೀರಾ ಜಾಸ್ಮಿನ್
    ನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್

    Monday, April 6, 2009, 18:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X