twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರೋದ್ಯಮದ ತ್ರೈಮಾಸಿಕ ಫಲಿತಾಂಶ!

    By *ನಿಸ್ಮಿತಾ
    |

    Nam Yajamanru movie still
    2009ನೇ ಸಾಲಿನ ಜನವರಿಯಿಂದ ಇದುವರೆಗೂ 25ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಅದರಲ್ಲಿ "ಜಂಗ್ಲಿ" ಮತ್ತು "ಅಂಬಾರಿ" ಚಿತ್ರಗಳು ಹೊರತು ಪಡಿಸಿ ಯಾವುದೂ ಹಿಟ್ ಆಗಿಲ್ಲ. ಮೂರು ತಿಂಗಳಲ್ಲಿ ಕನ್ನಡ ಚಿತ್ರೋದ್ಯಮ ಸುಮಾರು ರು. 50 ಕೋಟಿ ನಷ್ಟ ಅನುಭವಿಸಿದೆ ಎನ್ನಲಾಗಿದೆ.

    ಈ ವರ್ಷದ ಮೊದಲ ಚಿತ್ರ ಪ್ರಜ್ವಲ್ ದೇವರಾಜ್ ಅಭಿನಯದ 'ಗುಲಾಮ' ಮೂರೇ ವಾರದಲ್ಲಿ ಎತ್ತಂಗಡಿಯಾಗಿ ಫ್ಲಾಪ್ ಹಣೆಪಟ್ಟಿ ಹಚ್ಚಿಕೊಂಡಿತು. 'ಒರಟ ಐ ಲವ್ ಯು' ಚಿತ್ರದ ಯಶಸ್ಸಿನಿಂದ ಬೇಡಿಕೆ ಹೆಚ್ಚಿಸಿಕೊಂಡಿದ್ದ ಪ್ರಶಾಂತ್ ಅಭಿನಯದ 'ಅಂಜದಿರು' ಮಕಾಡೆ ಮಲಗಿಕೊಂಡಿತು. ಹೊಸಬರು ಯಶಸ್ಸು ಸಾಧಿಸಬಹುದು ಅನ್ನುವ ಗಾಂಧಿನಗರದ ಲೆಕ್ಕಾಚಾರ ತಲೆಕೆಳಗಾಯಿತು.

    ಈ ಸಂಭಾಷಣೆ, ಬಾಜಿ, ತಬ್ಬಲಿ ಮುಂತಾದ ಚಿತ್ರಗಳು ಕಷ್ಟಪಟ್ಟು ಒಂದುವಾರ ಪ್ರದರ್ಶನ ಕಂಡು, ನಿರ್ಮಾಪಕರಿಗೆ ಪ್ರಿಂಟ್ ದುಡ್ಡು ಕೂಡ ವಾಪಾಸ್ಸು ಬರಲಿಲ್ಲ. ಪೂಜಾಗಾಂಧಿ ಅಭಿನಯದ "ಅನು" ಚಿತ್ರಕ್ಕೆ ಒಳ್ಳೆ ಪ್ರಶಂಸೆಯೇನೋ ಬಂತು, ಆದರೆ ಗಲ್ಲಾಪೆಟ್ಟಿಗೆಯಲ್ಲಿ ಅದ್ಯಾಕೋ ಸದ್ದು ಮಾಡಲಿಲ್ಲ. ಆದಿನಗಳು ಚಿತ್ರದ ನಂತರ ಹೊಸ ಭರವಸೆ ಹುಟ್ಟಿಸಿದ್ದ ಚೇತನ್ ಅಭಿನಯದ 'ಬಿರುಗಾಳಿ' ಉತ್ತಮ ಓಪನಿಂಗ್ ಕಂಡರೂ ನಿರ್ಮಾಪಕರಿಗೆ ಅಬ್ಬಬ್ಬಾ ಎಂದರೆ ಹಾಕಿರುವ ಬಂಡವಾಳ ತಂದಿರಬಹುದು.

    ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಪಕ,ವಿತರಕರಿಗೆ ಗಾಬರಿ ಹುಟ್ಟಿಸುವ ವಿಷಯವೆಂದರೆ ವಿಷ್ಣುವರ್ಧನ್ ಅಭಿನಯದ, ನಾಗಾಭರಣ ನಿರ್ದೇಶನದ "ನಂ ಯಜಮಾನ್ರು" ಚಿತ್ರ. ಸುಮಾರು 4.5 ಕೋಟಿ ರುಪಾಯಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರದಿಂದ ನಿರ್ಮಾಪಕರಿಗೆ ದಕ್ಕಿದ್ದು ಕೇವಲ 75 ಲಕ್ಷ ರುಪಾಯಿ!! ಹೀರೋ ಪಟ್ಟ ಉಳಿಸಿಕೊಳ್ಳಲು ಹಲವಾರು ನಾಯಕರು ಪರದಾಡುವಂತಾಗಿದೆ. ಜನವರಿಯಿಂದ ಇದುವರೆಗೆ ಕೇವಲ 20 ಹೊಸ ಚಿತ್ರಗಳು ಮಹೂರ್ತ ಕಂಡಿವೆ. ಎಷ್ಟೋ ವಿತರಕರು ಗಾಂಧಿನಗರದ ಸಹವಾಸ ಸಾಕು ಎಂದು ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ.

    ಸ್ವಲ್ಪ ನೆಮ್ಮದಿ ಪಡುವ ವಿಷವೇನೆಂದರೆ ದುನಿಯಾ ವಿಜಯ್ ಅಭಿನಯದ ಜಂಗ್ಲಿ, ಲೂಸ್ ಮಾದ ಯಾನೆ ಯೊಗೀಶ್ ಅಭಿನಯದ ಅಂಬಾರಿ ಮಾತ್ರ. ಗಾಂಧಿನಗರ ಬೆರಗಾಗುವಂತೆ ಕಲೆಕ್ಷನ್ ಗಳಿಸುತ್ತಾ ಮುನ್ನುಗ್ಗುತ್ತಿರುವುದು. ಈ ಮಧ್ಯೆ ಸುದೀಪ್ ಅಭಿನಯದ 'ವೀರ ಮದಕರಿ' ಮತ್ತು ಮಾಲಾಶ್ರೀ ಅಭಿನಯದ 'ಕನ್ನಡದ ಕಿರಣ್ ಬೇಡಿ' ಸದ್ಯದ ಮಟ್ಟಿಗೆ ನಿರ್ಮಾಪಕರಿಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಕನ್ನಡ ಚಿತ್ರರಂಗ ತನ್ನ ಹಳೆಯ ವೈಭವದ ದಿನವನ್ನು ಮತ್ತೆ ಆದಷ್ಟು ಬೇಗ ಕಾಣುವಂತಾಗಲಿ ಅನ್ನುವುದು ಚಿತ್ರರಸಿಕರ ಆಶಯ.

    ಬಾಕ್ಸಾಫೀಸ್ ಗಳಿಕೆಯಲ್ಲಿ ದಾಖಲೆ ಬರೆದ ಜಂಗ್ಲಿ
    ಎಲ್ಲ ಯೋಗೀಶನ ಮಹಿಮೆ, ಶತಕದತ್ತ ಅಂಬಾರಿ
    ವೀರ ಮದಕರಿ: ನೂರಕ್ಕೆ ಅರುವತ್ತು ಮಾರ್ಕುಡು!
    ನಮ್ 'ಆಪ್ತಮಿತ್ರ' ಯಜಮಾನ್ರು

    Monday, April 6, 2009, 14:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X