»   »  ಮಲಯಾಳಂಗೆ ಪುನೀತ್ ರಾಜ್ ಕುಮಾರ್!

ಮಲಯಾಳಂಗೆ ಪುನೀತ್ ರಾಜ್ ಕುಮಾರ್!

Subscribe to Filmibeat Kannada

ಪುನೀತ್ ರಾಜ್ ಕುಮಾರ್, ಪಾರ್ವತಿ ಮೆನನ್ ಅಭಿನಯದ 'ಮಿಲನ' ಚಿತ್ರ ಮಲಯಾಳಂ ಭಾಷೆಗೆ ಡಬ್ ಆಗಿದೆ. ಮಲೆಯಾಳಂನಲ್ಲಿ ಈ ಚಿತ್ರಕ್ಕೆ 'ಇಷ್ಟಂ ಎನಕ್ಕಿಷ್ಟಂ' ಎಂದು ಹೆಸರಿಡಲಾಗಿದೆ. ಪ್ರಕಾಶ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಪ್ರಕಾಶ್ ಈಗ 'ಗೋಕುಲ' ಎಂಬ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಈ ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಕೇರಳ ಚಿತ್ರರಂಗಕ್ಕೂ ಅಡಿಯಿಟ್ಟಂತಾಗುತ್ತದೆ. ಮಿಲನ ಚಿತ್ರದ ನಾಯಕಿ ಪಾರ್ವತಿ ಮಲೆಯಾಳಂನ ಜನಪ್ರಿಯ ನಟಿಯೂ ಹೌದು. ಕೇರಳದ ಅಭಿಮಾನಿಗಳಿಗೆ ಈ ಚಿತ್ರ ಖಂಡಿತವಾಗಿ ಇಷ್ಟವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪುನೀತ್ ಅಭಿನಯದ 'ಬಿಂದಾಸ್' ಚಿತ್ರ ತೆಲುಗಿಗೆ ಡಬ್ ಆಗಿತ್ತು. ಈಗ 'ಮಿಲನ' ಚಿತ್ರದ ಸರದಿ. ಮಾಲಾಶ್ರೀ ಅಭಿನಯದ 'ಕನ್ನಡದ ಕಿರಣ್ ಬೇಡಿ' ತೆಲುಗಿಗೆ 'ಆಂಧ್ರ ಕಿರಣ್ ಬೇಡಿ'ಯಾಗಿ ಡಬ್ ಆಗಿತ್ತು. ಕನ್ನಡ ಚಿತ್ರರಂಗದಲ್ಲಿ 'ಶ್ವೇತ ನಾಗು' ಚಿತ್ರದ ಡಬ್ಬಿಂಗ್ ವಿವಾದ ಕಾವೇರಿದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರಗಳು ಪರಭಾಷೆಗೆ ಡಬ್ ಆಗುತ್ತಿದ್ದು ಚಿತ್ರೋದ್ಯಮದಲ್ಲಿ ಅಚ್ಚರಿ ಮೂಡಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada