»   » 'ಯೂ ಟೂಬ್' ಮಾಯಾತಾಣದಲ್ಲಿ ಕನ್ನಡ ಝಲಕ್!

'ಯೂ ಟೂಬ್' ಮಾಯಾತಾಣದಲ್ಲಿ ಕನ್ನಡ ಝಲಕ್!

Subscribe to Filmibeat Kannada

ಪ್ರಸಿದ್ಧ ವಿಡಿಯೋ ಅಂತರ್ಜಾಲ ತಾಣ 'ಯು ಟೂಬ್'ನಲ್ಲಿ ಕನ್ನಡ ಸಿನಿಮಾ ಟ್ರೈಲರ್‌ಗಳು, ಹಾಡುಗಳು ಸೂಪರ್ ಹಿಟ್ ಆಗುತ್ತಿವೆ. ಚಿತ್ರಗಳ ಪೂರ್ವ ಪ್ರದರ್ಶನ (ಪ್ರೀಮಿಯರ್ ಶೋ)ಜಾಹೀರಾತು, ವಿಶೇಷ ಪ್ರದರ್ಶನ ಹಾಳು ಮೂಳು ಎಂದು ಎಗ್ಗಿಲ್ಲದಂತೆ ಖರ್ಚು ಮಾಡುವ ಬದಲು ನಯಾ ಪೈಸೆ ಖರ್ಚಿಲ್ಲದೆ 'ಯೂ ಟೂಬ್‌'ನಲ್ಲಿ ವಿಡಿಯೋ ತುಣುಕುಗಳನ್ನು ಸೇರಿಸುವುದು ಜಾಣತನ ಅಲ್ಲವೆ! ಈಗ ಬಹಳಷ್ಟು ನಿರ್ಮಾಪಕರು ಯೂ ಟೂಬ್‌ನಿಂದ ಬಹಳಷ್ಟು ಪ್ರಯೋಜನ ಪಡೆಯುತ್ತಿದ್ದಾರೆ.

ಉದಾಹರಣೆಗೆ ಹೇಳುವುದಾದರೆ, ಪುನೀತ್ ರಾಜ್‌ಕುಮಾರ್ ನಟಿಸಿದ 'ಮಿಲನ' ಚಿತ್ರದ 'ಅಂತು ಇಂತು ಪ್ರೀತಿ ಬಂತು...' ಹಾಡಂತೂ 'ಯೂ ಟೂಬ್‌'ನಲ್ಲಿ ಬಹಳಷ್ಟು ಜನಪ್ರಿಯವಾಗಿದೆ. ಹನ್ನೊಂದು ತಿಂಗಳ ಹಿಂದೆ ಸೇರ್ಪಡೆಯಾದ ಈ ಹಾಡನ್ನು ಇದುವರೆಗೂ 106,000 ಮಂದಿ ನೋಡಿದ್ದಾರೆ. ಹಾಗೆಯೇ ಗೋಲ್ಡನ್ ಸ್ಟಾರ್ ಗಣೇಶ್‌ರ ಗಾಳಿಪಟ ಚಿತ್ರದ ವಿಡಿಯೋ ತುಣುಕು 107,000 ಮಂದಿಯ ಕಣ್ಣಿಗೆ ಬಿದ್ದಿದೆ. ಇದು ಜ.18ರಂದು ಯೂ ಟೂಬ್‌ ಸೇರಿಕೊಂಡ ಗಾಳಿಪಟ ಎತ್ತರೆತ್ತರಕ್ಕೆ ಹಾರುತ್ತಲೇ ಇದೆ.

ಸೈಕೊ ಚಿತ್ರದ 'ಪೂಜೆಗೆ ಬಂದೆ ಮಾದೇಶ್ವರ' ಹಾಡಂತೂ ಸಿಕ್ಕಾಪಟ್ಟೆ ಹೆಸರು ಮಾಡಿದೆ. ಕೇವಲ ಒಂದು ತಿಂಗಳಲ್ಲಿ 100,000 ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ಚಿತ್ರದ ಟ್ರೈಲರನ್ನು 35,000 ಜನ ವೀಕ್ಷಿಸಿದ್ದಾರೆ. ಯೂ ಟೂಬ್‌ಗೆ ಸೇರ್ಪಡೆಯಾದ 'ತಾಜ್ ಮಹಲ್' ಚಿತ್ರ ಹಾಡನ್ನು 8,992 ಮಂದಿ, ಬೊಂಬಾಟ್ ಚಿತ್ರದ 'ಮಾತಿನಲ್ಲಿ ಹೇಳಲಾರೆನು' ಹಾಡನ್ನು 200,00 ವೀಕ್ಷರು ನೋಡಿ ಆನಂದಿಸಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರಗಳು ಜಾಗತಿಕವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿರುವುದು ಸಂತೋಷದ ವಿಚಾರ. ಯೂಟೂಬ್ ಜೊತೆಗೆ ಆರ್ಕುಟ್, ಮೈ ಸ್ಪೇಸ್ ನಂತಹ ಸಮುದಾಯ ತಾಣಗಳಲ್ಲಿ ಕೂಡ ಕನ್ನಡ ಚಿತ್ರಗಳು ಕಂಪು ಬೀರಲು ಶುರುಮಾಡಿವೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಪೂಜಾಗಾಂಧಿ, ಅಜಯ್ ಅವರ ತಾಜ್ ಮಹಲ್ ಟ್ರೈಲರ್
ಸೈಕೋ ಚಿತ್ರದ ಟ್ರೈಲರ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada