ದಂಡುಪಾಳ್ಯದಲ್ಲಿ ಅರೆಬೆತ್ತಲೆ: ಪೂಜಾ ಗಾಂಧಿ ಉತ್ತರ

"ಬೆನ್ನನ್ನು ನಗ್ನವಾಗಿ ತೋರಿಸಿದ್ದು, ಬೀಡಿ ಸೇದಿದ್ದು ಎಲ್ಲವೂ ನಿಜ. ಬಾಲಿವುಡ್ ನಲ್ಲಿ ರೇಖಾ, ಶಬನಾ ಅಜ್ಮಿ, ಸ್ಮಿತಾ ಪಾಟೀಲ್, ವಿದ್ಯಾ ಬಾಲನ್ ಅವರೆಲ್ಲ ಇಂತಹ ಪಾತ್ರ ಮಾಡಿಲ್ಲವೇ? ಸಾಕಷ್ಟು ಯೋಚನೆ ಮಾಡಿಯೇ ಈ ಪಾತ್ರ ಒಪ್ಪಿಕೊಂಡಿದ್ದೇನೆ, ಮಾಡಿದ್ದೇನೆ. ಅದರಲ್ಲಿ ಮುಜುಗರ ಅಥವಾ ಪಶ್ಚಾತ್ತಾಪ ಪಡುವಂಥಾದ್ದು ಏನಿದೆ?" ಎಂದರು ಪೂಜಾ ಗಾಂಧಿ.
ಒಬ್ಬ ನಟಿ ಪಾತ್ರಕ್ಕೆ ಅಗತ್ಯವಿದ್ದಾಗ ಮೈ ಪ್ರದರ್ಶನ ಮಾಡುವುದು ತಪ್ಪೆಂದು ಹೇಗೆ ಹೇಳುವುದು? ಬಾಲಿವುಡ್ ನಲ್ಲಿ ಮಾಡಿದರೆ ಓಕೆ, ಸ್ಯಾಂಡಲ್ ವುಡ್ ನಲ್ಲಿ ಯಾಕೆ ಎನ್ನುವುದು ಎಷ್ಟರಮಟ್ಟಿಗೆ ಸರಿ. ಪ್ರೇಕ್ಷಕರು, ಪತ್ರಕರ್ತರೆಲ್ಲರೂ ತಮ್ಮನ್ನು ತಾವೇ ಪ್ರಶ್ನೆ ಕೇಳಿಕೊಳ್ಳುವಂತಿತ್ತು ಪೂಜಾ ಗಾಂಧಿಯ ಉತ್ತರ ರೂಪದ ಪ್ರಶ್ನೆ. ಪಾತ್ರಕ್ಕಾಗದ ಕಲಾವಿದರನ್ನು 'ಕಲಾವಿದರು' ಎನ್ನಲಾದೀತೆ? (ಒನ್ ಇಂಡಿಯಾ ಕನ್ನಡ)
English summary
Srinivasaraju directed 'Dandupalya' movie completed shooting. Pooja Gandhi acted boldly for this.


Click it and Unblock the Notifications