»   » ಜೋಶ್ ನಟರಿಗೆ ಪಲ್ಸಾರ್ ಬೈಕ್ ಗಳ ಸಂಭಾವನೆ!

ಜೋಶ್ ನಟರಿಗೆ ಪಲ್ಸಾರ್ ಬೈಕ್ ಗಳ ಸಂಭಾವನೆ!

Subscribe to Filmibeat Kannada

ಚಿತ್ರರಂಗದಲ್ಲಿ ಕೋಟಿಗಟ್ಟಲೆ ಸಂಭಾವನೆ ಪಡೆಯುವ ನಟರ ಬಗ್ಗೆ ಕೇಳಿದ್ದೀವಿ ಆದರೆ ಪಲ್ಸಾರ್ ಮೋಟಾರ್ ಬೈಕ್ ಗಳನ್ನು ಸಂಭಾವನೆಯಾಗಿ ಪಡೆದ ನಟರ ಬಗ್ಗೆ ಗೊತ್ತಾ? ಎಸ್.ವಿ.ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ 'ಜೋಶ್' ಚಿತ್ರದ 6 ಮಂದಿ ಹೊಸ ನಟರಿಗೆ ರು.70,000 ಬೆಲೆ ಬಾಳುವ ಪಲ್ಸಾರ್ ಬೈಕ್ ಗಳನ್ನು ವಿತರಿಸಲಾಗಿದೆ.

ಜೋಶ್ ಚಿತ್ರದ ಮೂಲಕ ಹೊಸ ಮುಖಗಳಾದ ರಾಕೇಶ್, ವಿಷ್ಣು ಪ್ರಸನ್ನ, ಅಕ್ಷಯ್, ಅಲೋಕ್, ಅಮಿತ್ ಮತ್ತು ಜಗನ್ನಾಥ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ. ಇವರಿಗೆಲ್ಲಾ ಜೋಶ್ ಚಿತ್ರದ ನಿರ್ಮಾಪಕ ಎಸ್.ವಿ.ಬಾಬು ಪಲ್ಸಾರ್ ಬೈಕ್ ಗಳನ್ನು ಸಂಭಾವನೆಯಾಗಿ ಕೊಟ್ಟಿದ್ದಾರೆ. ಶೀಘ್ರದಲ್ಲೇ ಜೋಶ್ ಚಿತ್ರದ ಧ್ವನಿಸುರುಳಿ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು ಹೊಸಬರ ತಂಡದ ಜೋಶ್ ಡಿಸೆಂಬರ್ ನಲ್ಲಿ ತೆರೆಕಾಣಲಿದೆ ಎಂದು ಎಸ್.ವಿ.ಪ್ರೊಡಕ್ಷನ್ಸ್ ತಿಳಿಸಿದೆ.

ಜೋಶ್ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಶಿವಮಣಿ ಹೊತ್ತಿದ್ದಾರೆ. ಆರು ಮಂದಿ ಹೊಸಮುಖಗಳಿಗೆ ಪಲ್ಸಾರ್ ಬೈಕ್ ಗಳು ಸಂದಾಯವಾಗಿದ್ದರೆ ಉಳಿದ ಕಲಾವಿದರಿಗೆ ನಿಯಮಿತವಾಗಿ ಹಣ ಸಂದಾಯವಾಗಿದೆ. ಚಿತ್ರದ ನಾಯಕ ನಟರಲ್ಲಿ ಒಬ್ಬರಾದ ರಾಕೇಶ್ ಅವರನ್ನು ಎಸ್.ವಿ.ಪ್ರೊಡಕ್ಷನ್ಸ್ ತನ್ನ ಮುಂದಿನ ಚಿತ್ರಕ್ಕೆ ಈಗಾಗಲೇ ಆಯ್ಕೆ ಮಾಡಿಕೊಂಡಿದೆ. ಸವಿಸವಿ ನೆನಪು ಹಾಗೂ 7' ಓ ಕ್ಲಾಕ್ ಚಿತ್ರಗಳನ್ನು ನಿರ್ದೇಶಿಸಿದ ಸೈ ಎನಿಸಿಕೊಂಡ ಸಂತೋಷ್ ರೈಪತಾಜೆ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

'ಜೋಶ್' ಚಿತ್ರ ಮಾತಿನ ಮನೆಯಲ್ಲಿ
'ಜೋಶ್'ನಲ್ಲಿ ಅಪಾರ ವೆಚ್ಚದ ಸುಂದರ ಗೀತೆ
ಜೈಪುರದಲ್ಲಿ ಜೋಶ್ಹಾಡಿಗೆ ಕುಣಿದ ಹುಡುಗರು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada