»   » ರಾಕಿ ಚಿತ್ರ ಅಭಿಮಾನ್ ಸ್ಟುಡಿಯೋದಲ್ಲಿ ಶೂಟಿಂಗ್

ರಾಕಿ ಚಿತ್ರ ಅಭಿಮಾನ್ ಸ್ಟುಡಿಯೋದಲ್ಲಿ ಶೂಟಿಂಗ್

Subscribe to Filmibeat Kannada

'1,2 ರಿಂಗ್ ರಿಂಗ್ ಆರ್ಟಿಸ್ಟ್ ಕಾಲಿಂಗ್ - ಮೆಸೆಜ್ ಒಂದು ಬಂತು...', 'ಐ ಲೈಕ್ ಯು ಅಂತ ಐ ಲವ್ ಯು ಅಂತ ಅವಳ ಮನಸು ಅಂತು.....'
ಎಂದು ಸಂತೋಷ್ ಅವರು ಬರೆದಿರುವ ಗೀತೆಗೆ ನಾಯಕ್ ಯಶ್ ಹಾಗೂ ಬೆಡಗಿ ಬಿಯಾಂಕ ದೇಸಾಯಿ ಅಭಿಮಾನ ಸ್ಟುಡಿಯೋದಲ್ಲಿ ನಿರ್ಮಿಸಿರುವ ಸೆಟ್‌ನಲ್ಲಿ ಮುರುಳಿ ಅವರ ನೃತ್ಯ ಸಂಯೋಜನೆಯಲ್ಲಿ ಹೆಜ್ಜೆ ಹಾಕಿದ್ದನ್ನು ಯುವ ನಿರ್ದೇಶಕ ನಾಗೇಂದ್ರ ಅರಸ್ ಚಿತ್ರೀಕರಿಸಿಕೊಂಡರು.

ಅಲ್ಪ ವಿರಾಮದ ನಂತರ ಪುನರಾರಂಭಗೊಂಡ ರಾಕಿ ಚಿತ್ರವನ್ನು ಟಿ ಎನ್ ಫಿಲಂ ಲಾಂಛನದಲ್ಲಿ ಕೆ.ಎಲ್.ಸಿದ್ದರಾಜು ಹಾಗೂ ಮೇಕಲ್ ನಾರಾಯಣ ಸ್ವಾಮಿ ನಿರ್ಮಿಸುತ್ತಿದ್ದಾರೆ. ಆನಂದ್‌ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ವಿಜಯ್ ಚಂಡೂರ್ ಅವರು ಚಿತ್ರಕ್ಕೆ ಕಥೆ ಬರೆದರೆ ನಾಗೇಂದ್ರ ಅರಸ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಂಕಲನದ ಜವಾಬ್ದಾರಿಯನ್ನು ನಿರ್ದೇಶಕರೇ ಹೊತ್ತಿದ್ದಾರೆ.

ತಂಗಾಳಿ ನಾಗರಾಜ್, ಹರೀಶ್‌ಶೃಂಗ, ಕವಿರಾಜ್ ಹಾಗೂ ರಾಮ್‌ನಾರಾಯಣ್ ರಚಿಸಿರುವ ರಾಕಿಯ ಗೀತೆಗಳಿಗೆ ವೆಂಕಟ್-ನಾರಾಯಣ್ ಸಂಗೀತ ಸಂಯೋಜಿಸಿದ್ದಾರೆ. ಎಸ್.ಆರ್.ಸುಧಾಕರ್ ಛಾಯಾಗ್ರಹಣ, ಹರೀಶ್‌ಶೃಂಗ ಸಂಭಾಷಣೆ, ಹೊಸ್ಮನೆ ಮೂರ್ತಿ ಕಲೆ, ಮುರುಳಿ, ರಾಜೇಶ್ ಬ್ರಹ್ಮಾವರ್ ನೃತ್ಯ, ಬಸವರಾಜ್ ಕಮ್ಥರ ಸಹ ನಿರ್ದೇಶನ ಹಾಗೂ ಶರೀಫ್ ರಾಜು ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯಶ್, ಬಿಯಾಂಕ ದೇಸಾಯಿ, ಜೈ ಜಗದೀಶ್, ಪದ್ಮಜಾರಾವ್, ಎಂ.ಎನ್.ಲಕ್ಷ್ಮೀದೇವಿ, ಸಂಕೇತ್‌ಕಾಶಿ, ಪದ್ಮಾವಾಸಂತಿ, ರವಿ ಆರ್ ಗೌಡ, ಮೋಹನ್ ಜುನೇಜ, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ.

ಕಿರುತೆರೆಯಲ್ಲಿ ಈಗಾಗಲೇ ಪ್ರೀತಿ ಇಲ್ಲದ ಮೇಲೆ, ಗುಪ್ತಗಾಮಿನಿ, ನಂದಗೋಕುಲ ಮುಂತಾದ ಧಾರಾವಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಯಶ್ ಈ ಚಿತ್ರದ ಮೂಲಕ ಪ್ರಥಮ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇವರಿಗೆ ಜೋಡಿಯಾಗಿ ರೂಪದರ್ಶಿ ಬಿಯಾಂಕದೇಸಾಯಿ ನಟಿಸಲಿದ್ದಾರೆ.

(ದಟ್ಸ್ ಸಿನಿವಾರ್ತೆ)

ಚಿಗುರಿದ ಹಸಿರಿನಲ್ಲಿ ರಾಕಿ
ದೊಡ್ಡತೆರೆಗೆ ಯಶ್ ಎಂಬ ಹ್ಯಾಂಡ್ಸಮ್ ಹುಡುಗ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada