»   »  ನೈಜ ಘಟನೆ ಆಧಾರಿತ ಚಿತ್ರ ಹುಚ್ಚು ಹುಡುಗಿ

ನೈಜ ಘಟನೆ ಆಧಾರಿತ ಚಿತ್ರ ಹುಚ್ಚು ಹುಡುಗಿ

Subscribe to Filmibeat Kannada
Huch Hudugi
ಮುವ್ವತ್ತು ವರ್ಷಗಳ ಹಿಂದೆ ನಿಜ ಜೀವನದಲ್ಲಿ ನಡೆದಘಟನೆಯನ್ನು ತೆರೆಗೆ ತರುತ್ತಿದ್ದಾರೆ ನಿರ್ದೇಶಕ ಕುರೂಡಿ ಬನಕರ್. ಚಿತ್ರದುರ್ಗದ ಅಡಿಕೆ ಬೆಳೆಗಾರರಾದ ಟಿ.ಬಸವರಾಜು ಮತ್ತು ಪ್ರಸನ್ನ ಕುಮಾರ್ ನಿರ್ಮಿಸುತ್ತಿದ್ದಾರೆ. ಚಿತ್ರದ ಹೆಸರು ಹುಚ್ಚು ಹುಡುಗಿ.

ಹಿಂದಿಯ 'ಬಾಬ್ಬಿ'ಸಿನಿಮಾ ನೋಡಿಕೊಂಡು ಹಿಂತಿರುಗುತ್ತಿದ್ದ ಪ್ರೇಮಿಗಳಿಗೆ ಅಪಘಾತವಾಗುತ್ತದೆ. ಅಪಘಾತದಲ್ಲಿ ಹುಡುಗಿ ಸಾವಪ್ಪುತ್ತಾಳೆ. ಹುಡುಗ ಹುಚ್ಚನಾಗುತ್ತಾನೆ. ಈ ಘಟನೆಯನ್ನು ಕೊಂಚ ಬದಲಾವಣೆ ಮಾಡಿ ತೆರೆಗೆ ತರುತ್ತಿದ್ದಾರೆ ಕುರೂಡಿ ಬನಕರ್. ತುಮಕೂರು, ಸೋಮೇಶ್ವರ, ತಲಕಾಡು ವಿವಿಧ ಸ್ಥಳಗಳಲ್ಲಿ 40 ದಿನಗಳ ಚಿತ್ರೀಕರಣ ಮುಗಿಸಿದ್ದಾರೆ. ಶೇ.60ರಷ್ಟು ಚಿತ್ರೀಕರಣ ಮುಗಿದಿದೆ.

ಹುಚ್ಚು ಹುಡುಗಿ ಪಾತ್ರದಲ್ಲಿ ದಿವ್ಯಾ ಶ್ರೀಧರ್ ನಟಿಸುತ್ತಿದ್ದಾರೆ. ತೆರೆಯ ಮೇಲೆ ಆಕೆಯದು ಶೇ.40ರಷ್ಟು ಹುಚ್ಚಿ ಪಾತ್ರವಂತೆ.ನಾಯಕನ ಪಾತ್ರದಲ್ಲಿ ಹೊಸ ಹುಡುಗ ರವಿ ನಟಿಸುತ್ತಿದ್ದಾರೆ. ರಾಮಕೃಷ್ಣ, ರವಿತೇಜ, ಜಯಶ್ರೀ ಚಿತ್ರದ ಇತರ ಪಾತ್ರಧಾರಿಗಳು. ಸಂಗೀತ ಸಂಯೋಜನೆ ಗಂಧರ್ವ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada