ಮುರಳಿ ಸಾವಿನಿಂದ ಮುಂದೂಡಿದ್ದ ಪುತ್ರಿಯ ವಿವಾಹ ಏ.14ಕ್ಕೆ

ಅಂದಹಾಗೆ, ಕನ್ನಡ ಮೂಲದ ನಟ ಮುರಳಿ ಅವರ ಅಕಾಲಿಕ ಸಾವಿಗೆ ಒಂದು ವಾರ ಮುನ್ನ ಕಾವ್ಯ ನಿಶ್ಚಿತಾರ್ಥ ನಡೆದಿತ್ತು. 46 ವರ್ಷದ ಮುರಳಿ ಹೃದಯಾಘಾತಕ್ಕೀಡಾಗಿ ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ್ದರು. ಮುರಳಿ ಸಾವಿನ ಸಮ್ಮುಖದಲ್ಲಿ ತಕ್ಷಣ ಮದುವೆಯಾಗುವುದು ಬೇಡವೆಂದು ಎರಡೂ ಕುಟುಂಬದವರು ನಿರ್ಧರಿಸಿದ್ದರು. ಆದರೆ ಈಗ ಮದುವೆ ಸಿದ್ಧತೆಗಳು ಭರದಿಂದ ಸಾಗಿದ್ದು, ಏಪ್ರಿಲ್ 14ಕ್ಕೆ ಮುರಳಿ ಪುತ್ರಿಯ ವಿವಾಹ ನೆರವೇರುವುದು ಖಚಿತವಾಗಿದೆ.
'ಪ್ರೇಮ ಪರ್ವ', 'ಅಜೇಯ' 'ಪ್ರೇಮ ಗಂಗಾ', 'ಸಂಭವಾಮಿ ಯುಗೇ ಯುಗೇ' ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಮುರಳಿ ನಟಿಸಿದ್ದರು. ಅವರು ಹೆಚ್ಚಾಗಿ ತಮಿಳು ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದರು. ತಮಿಳಿನ 'ಬಾನ ಕಾತಾಡಿ' ಅವರ ಅಭಿನಯದ ಕೊನೆಯ ಚಿತ್ರ. ತಮ್ಮ 14ನೇ ವರ್ಷಕ್ಕೆ ಮುರಳಿ ಅವರು ತಂದೆ ಸಿದ್ದಲಿಂಗಯ್ಯ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಅವರ ಪುತ್ರ ಅಥರ್ವ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ.
More from Filmibeat
English summary
Late Kannada actor Murali’s daughter Dr Kavya will wed Malaysian-based Adithya, a software engineer by profession on April 14, 2011. The couple was engaged just a week prior to Murali’s death last year and the wedding was postponed. Murali started his movie journey with Kannada movie Prema Parva.
ಮುರಳಿ ವಿವಾಹ ಸಿದ್ಧಲಿಂಗಯ್ಯ ಹೃದಯಾಘಾತ ನಿಧನ ವಾರ್ತೆ ಪ್ರೇಮ ಪರ್ವ ಅಂತಿಮ ನಮನ murali marriage siddalingaiah heart attack sad demise ajay vijay chennai


Click it and Unblock the Notifications











