For Quick Alerts
  ALLOW NOTIFICATIONS  
  For Daily Alerts

  ಮುರಳಿ ಸಾವಿನಿಂದ ಮುಂದೂಡಿದ್ದ ಪುತ್ರಿಯ ವಿವಾಹ ಏ.14ಕ್ಕೆ

  By Srinath
  |
  ಚೆನ್ನೈ, ಏ. 5: ಕಳೆದ ವರ್ಷ ಸೆಪ್ಟೆಂಬರ್ 8ರಂದು ಅಕಾಲಿಕವಾಗಿ ಮೃತಪಟ್ಟ ತಮಿಳಿನ ಖ್ಯಾತ ನಟ ಮುರಳಿ ಅವರ ಮಗಳು ಡಾ. ಕಾವ್ಯ ಮತ್ತು ಮಲೇಷ್ಯಾದಲ್ಲಿ ನೆಲೆಸಿರುವ ಸಾಫ್ಟ್ ವೇರ್ ಎಂಜಿನಿಯರ್ ಆದಿತ್ಯ ಅವರ ವಿವಾಹ ಇದೇ 14ರಂದು ಚೆನ್ನೈನ ಶ್ರೀ ವಾರು ವೆಂಕಟಾಚಲಪತಿ ಪ್ಯಾಲೆಸ್ ನಲ್ಲಿ ನೆರವೇರಲಿದೆ.

  ಅಂದಹಾಗೆ, ಕನ್ನಡ ಮೂಲದ ನಟ ಮುರಳಿ ಅವರ ಅಕಾಲಿಕ ಸಾವಿಗೆ ಒಂದು ವಾರ ಮುನ್ನ ಕಾವ್ಯ ನಿಶ್ಚಿತಾರ್ಥ ನಡೆದಿತ್ತು. 46 ವರ್ಷದ ಮುರಳಿ ಹೃದಯಾಘಾತಕ್ಕೀಡಾಗಿ ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದ್ದರು. ಮುರಳಿ ಸಾವಿನ ಸಮ್ಮುಖದಲ್ಲಿ ತಕ್ಷಣ ಮದುವೆಯಾಗುವುದು ಬೇಡವೆಂದು ಎರಡೂ ಕುಟುಂಬದವರು ನಿರ್ಧರಿಸಿದ್ದರು. ಆದರೆ ಈಗ ಮದುವೆ ಸಿದ್ಧತೆಗಳು ಭರದಿಂದ ಸಾಗಿದ್ದು, ಏಪ್ರಿಲ್ 14ಕ್ಕೆ ಮುರಳಿ ಪುತ್ರಿಯ ವಿವಾಹ ನೆರವೇರುವುದು ಖಚಿತವಾಗಿದೆ.

  'ಪ್ರೇಮ ಪರ್ವ', 'ಅಜೇಯ' 'ಪ್ರೇಮ ಗಂಗಾ', 'ಸಂಭವಾಮಿ ಯುಗೇ ಯುಗೇ' ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಮುರಳಿ ನಟಿಸಿದ್ದರು. ಅವರು ಹೆಚ್ಚಾಗಿ ತಮಿಳು ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದರು. ತಮಿಳಿನ 'ಬಾನ ಕಾತಾಡಿ' ಅವರ ಅಭಿನಯದ ಕೊನೆಯ ಚಿತ್ರ. ತಮ್ಮ 14ನೇ ವರ್ಷಕ್ಕೆ ಮುರಳಿ ಅವರು ತಂದೆ ಸಿದ್ದಲಿಂಗಯ್ಯ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಅವರ ಪುತ್ರ ಅಥರ್ವ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ.

  English summary
  Late Kannada actor Murali’s daughter Dr Kavya will wed Malaysian-based Adithya, a software engineer by profession on April 14, 2011. The couple was engaged just a week prior to Murali’s death last year and the wedding was postponed. Murali started his movie journey with Kannada movie Prema Parva.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X