ಏನಾಯ್ತು ಮಧು ಬಂಗಾರಪ್ಪ ನಟನೆಯ ಚಿತ್ರ ದೇವಿ?

ಮಧು ಬಂಗಾರಪ್ಪ ತಮ್ಮ ತಾಯಿ ಶಕುಂತಲಮ್ಮನ ಹೆಸರಿನ ಬ್ಯಾನರಿನಲ್ಲಿ ನಿರ್ಮಿಸುತ್ತಿರುವ 'ದೇವಿ' ಚಿತ್ರ, ಮುಹೂರ್ತವಾಗಿ ಒಂದು ವರ್ಷ ಕಳೆದರೂ ಪತ್ತೆಯೇ ಇಲ್ಲ. ಕಡಿಮೆ ಬಜೆಟ್ಟಿನ, ಹೊಸ ನಿರ್ಮಾಪಕರ ಚಿತ್ರವಾದರೆ ಹಣಕಾಸಿನ ತೊಂದರೆಯಿಂದ ಅರ್ಧಕ್ಕೋ, ಅಥವಾ ಆದಷ್ಟಕ್ಕೇ ನಿಲ್ಲುವುದು ಸಹಜ. ಆದರೆ ಈ ದೇವಿಯ ಚಿತ್ರದ ಕಥೆ ಅದಾಗಲು ಸಾಧ್ಯವಿಲ್ಲ.

ಮಧು ಬಂಗಾರಪ್ಪ, ಚಿತ್ರ ನಿರ್ಮಾಣಕ್ಕೆ, ಚಿತ್ರರಂಗಕ್ಕೆ ಹೊಸಬರಲ್ಲ. ಚಿತ್ರನಿರ್ಮಾಣ ಹಾಗೂ ಗಾಂಧಿನಗರದ ಒಳಹೊರಗುಗಳನ್ನೆಲ್ಲ ಅರೆದು ಕುಡಿದವರು. ಅವರ ಚಿತ್ರ ಪೂರ್ತಿಯಾಗದೇ ಮರೆಯಾಗುವುದೆಂದರೆ ನಂಬಲು ಸಾಧ್ಯವಿಲ್ಲ. ಒಲವೇ ಮಂದಾರ ಚಿತ್ರದಲ್ಲಿ ನಾಯಕಿಯಾಗಿದ್ದ ಆಕಾಂಕ್ಷ, ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯ ನಂತರ ಈ ಚಿತ್ರದ ಯಾವ ಸುದ್ದಿಯೂ ಕಿವಿಗೆ ಬಿದ್ದಿಲ್ಲ.

ಈಶ್ವರ್ ನಿರ್ದೇಶನದ, ಅನುಭವಿಯ ನಿರ್ಮಾಣದ ಈ ಚಿತ್ರದ ಕಥೆಯೇ ಹೀಗಾದರೆ ಗಾಂಧಿನಗರದಲ್ಲಿ ಉಳಿದವರ ಪಾಡೇನು ಎಂಬ ಪ್ರಶ್ನೆ ಗಾಂಧಿನಗರದ ಗಲ್ಲಿಯಲ್ಲಿ ಓಡಾಡುತ್ತಿದೆ. ಗಾಂಧಿನಗರ ಹಾಗೂ ಸಿನಿಪ್ರೇಕ್ಷಕರ ತಲೆಕೊರೆಯುತ್ತಿರುವ ಉತ್ತರವಿಲ್ಲದ ಸದ್ಯದ ಪ್ರಶ್ನೆಗೆ ಉತ್ತರ ಗೊತ್ತಿದ್ದರೆ ದಯವಿಟ್ಟು ತಿಳಿಸಿ, ದೇವಿಯ ದರ್ಶನ ಎಂದು? (ಒನ್ ಇಂಡಿಯಾ ಕನ್ನಡ)

More from Filmibeat

English summary
Madhu Bangarappa produced kannada movie Devi, No release news. Madhu Bangarappa and Sneha Ullal Pair.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X