ರಾಮ್ ಗೋಪಾಲ್ ವರ್ಮಾಗೆ ಮೈಸೂರು ನಟಿ ನೋಟೀಸ್
ನೈಜ ಘಟನೆಗಳನ್ನು ಆಧರಿಸಿ ಹಲವಾರು ಚಿತ್ರಗಳೀಗೆ ರೀಲು ಸುತ್ತಿ ಯಶಸ್ಸನ್ನೂ ಸಾಧಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮ. ಈಗವರು ನೀರಜ್ ಗ್ರೋವರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೈಸೂರು ನಟಿ ಮಾರಿಯಾ ಮೋನಿಕಾ ಸುಸೈರಾಜ್ ನೈಜ ಕತೆಯನ್ನು ಬೆಳ್ಳಿತೆರೆಗೆ ತರುತ್ತಿದ್ದಾರೆ.
ಆದರೆ ತಮ್ಮ ಅನುಮತಿ ಇಲ್ಲದೆ ತಮ್ಮ ಕತೆಯನ್ನು ತೆರೆಗೆ ತರುತ್ತಿದ್ದಾರೆ ಎಂದು ಆರೋಪಿಸಿ ರಾಮ್ ಗೋಪಾಲ್ ವರ್ಮಗೆ ನಟಿ ಮಾರಿಯಾ ಸುಸೈರಾಜ್ ನೋಟೀಸ್ ಜಾರಿ ಮಾಡಿದ್ದಾರೆ. ಒಂದು ವಾರದೊಳಗಾಗಿ ಚಿತ್ರವನ್ನು ತಮ್ಮದುರು ಪ್ರದರ್ಶಿಸದಿದ್ದರೆ ಮೊಕದ್ದಮೆ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಆದರೆ ಯಾವುದೇ ಕಾರಣಕ್ಕೂ ತಮ್ಮ ಚಿತ್ರವನ್ನು ಮಾರಿಯಾಗೆ ತೋರಿಸುವುದಿಲ್ಲ ಎಂಬ ಉತ್ತರವನ್ನೂ ವರ್ಮಾ ನೀಡಿದ್ದಾರೆ. ಮಾರಿಯಾ ನೈಜ ಕತೆ ಆಧಾರಿತವಾಗಿ ನಾಟ್ ಎ ಲವ್ ಸ್ಟೋರಿ ಎಂಬ ಚಿತ್ರವನ್ನು ವರ್ಮ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಸಂಪೂರ್ಣ ಹೊಸಬರನ್ನೇ ಹಾಕಿಕೊಂಡು ವರ್ಮಾ ನಿರ್ದೇಶಿಸಿರುವ ಚಿತ್ರವಿದು. ಇದೇ ಆಗಸ್ಟ್ 19ರಂದು ಚಿತ್ರ ತೆರೆಕಾಣಲು ಸಿದ್ಧವಾಗಿದೆ. (ಏಜೆನ್ಸೀಸ್)


Click it and Unblock the Notifications











