ಸತತ ಇಪ್ಪತ್ತೈದು ದಿನ ಪೂರೈಸಿದ ಕೋಳಿ ಕೋತಿ ಆಟ
ಪ್ರಿಯಾಮಣಿ ಮತ್ತು ಶ್ರೀನಗರ ಕಿಟ್ಟಿ 'ಕೋಳಿ ಕೋತಿ' ಆಟ ಸತತ ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಇತ್ತೀಚೆಗೆ ಚಿತ್ರತಂಡ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಆಚರಿಸಿಕೊಂಡಿತು. ಕೇಕ್ ಕತ್ತರಿಸಿ ಚಿತ್ರತಂಡ ಸಂಭಮಪಟ್ಟಿತು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಚಂದ್ರು, ಇಷ್ಟೆಲ್ಲಾ ಚಿತ್ರಗಳ ನಡುವೆ ನಮ್ಮ 'ಕೋ ಕೋ' ಚಿತ್ರ ಮುನ್ನುಗ್ಗುತ್ತಿರುವ ಬಗ್ಗೆ ಸಂತೋಷವಾಗುತ್ತಿದೆ ಎಂದರೆ. 12 ರಿಂದ 15 ಸೆಂಟರ್‌ಗಳಲ್ಲಿ ಚಿತ್ರ ಮತ್ತೆ ಬಿಡುಗಡೆ ಮಾಡಲು ಬೇಡಿಕೆ ಬಂದಿದೆ ಎಂದು ತಿಳಿಸಿದರು.
ಅನುಪ್ರಭಾಕರ್, ಶ್ರೀಹರಿ, ಹರ್ಷಿಕಾ ಪೂಣಚ್ಚ, ರವಿಕಾಳೆ, ರಂಗಾಯಣ ರಘು, ಸುರೇಶ್ ಮಂಗಳೂರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ರಮಣ ಗೋಗುಲ ಮಟ್ಟುಗಳು ವಿಭಿನ್ನವಾಗಿದ್ದು ಪ್ರೇಕ್ಷಕರಿಗೆ ಇಷ್ಟವಾಗಿವೆ ಎಂದು ಚಿತ್ರದ ನಿರ್ದೇಶಕರು ಹೇಳಿದ್ದಾರೆ. (ಏಜೆನ್ಸೀಸ್)
English summary
R Chandru directed Kannada movie Ko Ko completes 25 days. Koko movie is journey of game of love starring Srinagara kitty,priyamani.


Click it and Unblock the Notifications