ವಿಷ್ಣುವರ್ಧನನ ಬಿಡುಗಡೆ ವಿಳಂಬಕ್ಕೆ ಕಾರಣವೇನು?
ಸಾಕಷ್ಟು ಮೊದಲೇ ಬಿಡುಗಡೆ ಆಗಬೇಕಾಗಿದ್ದ ವಿಷ್ಣುವರ್ಧನ ಚಿತ್ರ, ಡಿಸೆಂಬರ್ 8 ರವರೆಗೆ ಡಬ್ಬಾದಲ್ಲೇ ಕುಳಿತಿರಲು ಕಾರಣವೇನಿತ್ತು ಎಂಬುದು ಬಹಿರಂಗವಾಗಿದೆ. ಸೆನ್ಸಾರ್ ಮಂಡಳಿಯ ನಿಯಮವನ್ನು ವಿಷ್ಣುವರ್ಧನ ಚಿತ್ರ ಪಾಲಿಸಲು ವಿಳಂಬ ಮಾಡಿದ್ದು ಕಾರಣ ಎಂಬುದೀಗ ಸ್ಪಷ್ಟವಾಗಿದೆ.
ಸೆನ್ಸಾರ್ ಮಂಡಳಿ ಹೇಳಿರುವ ಪ್ರಕಾರ ಈ ಚಿತ್ರದಲ್ಲಿ, ತೆರೆಯ ಮೇಲೆ ಬರುವ ಸುಮಾರು 15 ನಿಮಿಷಗಳ ಸ್ಮೋಕಿಂಗ್ ದೃಶ್ಯದ ಜೊತೆ 'ಧೂಮಪಾನ ಆರೋಗ್ಯಕ್ಕೆ ಕಾನಿಕರ, ಧೂಮಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ' ಮುಂತಾದ ಸೆನ್ಸಾರ್ ನಿಯಮದ 'ಸ್ಕ್ರೋಲ್' ಅಳವಡಿಸಿಕೊಳ್ಳಲು ಸೂಚಿಸಲಾಗಿತ್ತು. ಆದರೆ ನಿರ್ಮಾಪಕರು ಅದನ್ನು ಪಾಲಿಸಲು ಬಹಳಷ್ಟು ಸಮಯ ತೆಗೆದುಕೊಂಡರು.
ಇದು ಪ್ರಾದೇಶಿಕ ಸೆನ್ಸಾರ್ ಮಂಡಳಿಯ ನಿಯಮವೇನಲ್ಲ, ಕೇಂದ್ರದ್ದು. ಹಾಗಾಗಿ, ಅನಿವಾರ್ಯವಾಗಿ ಸೆನ್ಸಾರ್ 'ಓಕೆ' ಆಗಿ ಚಿತ್ರ ತೆರೆಗೆ ಬರಲು ಈ ವರ್ಷದ ಕೊನೆಯೇ ಬರಬೇಕಾಯ್ತು. ಒಟ್ಟಿನಲ್ಲಿ ವಿಳಂಬದಿಂದ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಯ್ತು. ಹಾಗೇ ಸಹಜವಾಗಿ ನಿರ್ಮಾಪಕರ ಬಜೆಟ್ ಕೂಡ. ಈಗ ಬಿಡುಗಡೆ ಕ್ಷಣ ಸನ್ನಿಹಿತವಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











