ಪುನೀತ್ 'ಪರಮಾತ್ಮ' ಆಡಿಯೋ ರಿಲೀಸ್‌ಗೆ ಬ್ರೇಕ್

By Rajendra

ಎಲ್ಲವೂ ಸರಿಹೋಗಿದ್ದ್ದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಪರಮಾತ್ಮ' ಚಿತ್ರದ ಆಡಿಯೋ ಸಿಡಿ ಇಷ್ಟೊತ್ತಿಗಾಗಲೆ ಅವರ ಅಭಿಮಾನಿಗಳ ಕೈ ಸೇರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಆಡಿಯೋ ಬಿಡುಗಡೆ ಮುಂದೂಡಲ್ಪಟ್ಟಿದೆ. ಇನ್ನು ಮೂರು ನಾಲ್ಕು ದಿನಗಳಷ್ಟು ತಡವಾಗಿ 'ಪರಮಾತ್ಮ' ಆಡಿಯೋ ಮಾರುಕಟ್ಟೆಗೆ ದಾಂಗುಡಿಯಿಡಲಿದೆ.

ಚೆನ್ನೈನಲ್ಲಿ 'ಪರಮಾತ್ಮ' ಆಡಿಯೋ ರೀರೆಕಾರ್ಡಿಂಗ್ ಕೆಲಸ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಸಾರಥ್ಯದಲ್ಲಿ ಭರದಿಂದ ನಡೆಯುತ್ತಿದೆ. ಪರಮಾತ್ಮ ಆಡಿಯೋ ಮಾಸ್ಟರ್ ಕಾಪಿ ಬೆಂಗಳೂರಿಗೆ ಸೇರುವುದು ಕೊಂಚ ತಡವಾಗಿದೆ. ಹಾಗಾಗಿ ಸೆಪ್ಟೆಂಬರ್ 4 ಅಥವಾ 5ಕ್ಕೆ ಬಿಡುಗಡೆಯಾಗಬೇಕಿದ್ದ ಆಡಿಯೋ ಮುಂದೂಡಲ್ಪಟ್ಟಿದೆ.

ಇನ್ನು ಮೂರ್ನಾಲ್ಕು ದಿನಗಳಲ್ಲಿ ಖಂಡಿತ 'ಪರಮಾತ್ಮ' ಆಡಿಯೋ ನಿಮ್ಮ ಕೈಸೇರುತ್ತದೆ ಎಂದಿದ್ದಾರೆ ಯೋಗರಾಜ್ ಭಟ್. ಅಶ್ವಿನ್ ಮೀಡಿಯಾ ವರ್ಕ್ಸ್ 'ಪರಮಾತ್ಮ' ಆಡಿಯೋ ಸಿಡಿಯನ್ನು ಹೊರತರುತ್ತಿದೆ. ಭಟ್ಟರ ಚಿತ್ರ ಎಂದರೆ ಹಾಡುಗಳು ಪ್ರಮುಖ ಆಕರ್ಷಣೆ ಎಂಥಲೇ ಹೇಳಬೇಕು. 'ಪರಮಾತ್ಮ'ನನ್ನು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Power Star Puneet Raj Kumar starer Paramathma audio lease delayed. Paramathma audio planned for release on September 4th or 5th, is likely to be released a few days later because of some unexpected bottlenecks that occurred while getting the master of the entire album.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X