For Quick Alerts
  ALLOW NOTIFICATIONS  
  For Daily Alerts

  ಡಾ. ರಾಜ್ ಹುಟ್ಟುಹಬ್ಬದ ದಿನ ಪುನೀತ್ ಹೊಸ ಚಿತ್ರ

  By Staff
  |

  ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ನಿರ್ದೇಶಿಸುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕ ನಟನಾಗಿ ನಟಿಸುತ್ತಿರುವ 'ರಾಜ್' ಚಿತ್ರದ ಹಾಡುಗಳ ಧ್ವನಿ ಮುದ್ರಣ ಕಾರ್ಯ ಮಹಾಶಿವರಾತ್ರಿ ದಿನ ಬೆಂಗಳೂರಿನಲ್ಲಿ ನಡೆಯಿತು.

  'ಗಜ' ಚಿತ್ರದ ನಿರ್ಮಾಪಕರಾದ ಡಿ.ಸುರೇಶ್ ಗೌಡ ಹಾಗೂ ಪಿ.ಎಸ್.ಶ್ರೀನಿವಾಸ ಮೂರ್ತಿ 'ರಾಜ್' ಚಿತ್ರದ ನಿರ್ಮಾಪಕರು. ಕಳೆದ ಮೂರು ವರ್ಷಗಳಿಂದ ಪುನೀತ್‌ರೊಂದಿಗೆ ಸಿನೆಮಾ ಮಾಡಬೇಕು ಅಂದುಕೊಂಡ ಕನಸು ಈಗ ನೆರವೇರುತ್ತಿದೆ. ಮೂರು ವರ್ಷಗಳ ಹಿಂದೆ ಪುನೀತ್‌ ಅವರನ್ನು ಭೇಟಿಯಾದಾಗ ಅವರೊಂದಿಗೆ ಚಿತ್ರ ತೆಗೆಯುತ್ತೇವೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. 'ರಾಜ್' ಚಿತ್ರ ಸೆಟ್ಟೇರಬೇಕಾದರೆ ನಿರ್ದೇಶಕ ಪ್ರೇಮ್ ಅವರೇ ಕಾರಣ ಎಂದು ನಿರ್ಮಾಪಕರಲ್ಲಿ ಒಬ್ಬರಾದ ಶ್ರೀನಿವಾಸಮೂರ್ತಿ ಸಾಲಿಡರ್ ಹೋಟೆಲ್‍ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ಶಿವಣ್ಣನ 'ಜೋಗಿ' ಚಿತ್ರವನ್ನು ನಿರ್ದೇಶಿಸಿದ ಪ್ರೇಮ್ ಏನು ಅನ್ನುವುದು ಎಲ್ಲರಿಗೂ ಗೊತ್ತು. ಪ್ರೇಕ್ಷಕರು ಅವರನ್ನು ನಿರ್ದೇಶಕ ಪ್ರೇಮ್ ಎಂದೇ ಗುರುತಿಸುತ್ತಾರೆ. ಅವರ ಶಕ್ತಿ-ಸಾಮರ್ಥ್ಯಗಳ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಪುನೀತ್ ಹರ್ಷ ವ್ಯಕ್ತಪಡಿಸಿದರು.

  ರಾಘವೇಂದ್ರ ರಾಜ್‌ಕುಮಾರ್ ಮಾತನಾಡುತ್ತಾ ಅಪ್ಪು (ಪುನೀತ್) ಮತ್ತು ಪ್ರೇಮ್‌ರ ಜೋಡಿ ಖಂಡಿತ ಪ್ರೇಕ್ಷಕರ ನಿರೀಕ್ಷೆಯನ್ನು ಸುಳ್ಳು ಮಾಡುವುದಿಲ್ಲ ಆದರೂ ಏನೋ ಕಾಣದ ಭಯ ಅವರನ್ನು ಕಾಡುತ್ತಿದೆ. ಈ ಭಯವೇ ಅವರು ಉತ್ತಮ ಚಿತ್ರ ಮಾಡಲು ನೆರವಾಗುತ್ತದೆ ಎಂದರು.

  ಒಟ್ಟು ಆರು ಹಾಡುಗಳಿರುವ 'ರಾಜ್' ಚಿತ್ರದಲ್ಲಿ ಮೂರು ಹಾಡುಗಳನ್ನು ಬೆಂಗಳೂರಿನಲ್ಲಿ ಮತ್ತು ಉಳಿದ ಮೂರು ಹಾಡುಗಳನ್ನು 8 ದೇಶಗಳಲ್ಲಿ ಚಿತ್ರೀಕರಿಸಲಾಗುತ್ತದೆ. ಹಾಡುಗಳಲ್ಲಿ ವೈವಿಧ್ಯತೆ ಇರುತ್ತದೆ. ಸಾಲದಕ್ಕೆ ಅಪ್ಪು ಉತ್ತಮ ನೃತ್ಯಪಟು. ಹಾಡುಗಳಲ್ಲಿ 25 ನಿಮಿಷಗಳ ಕಾಲ ನೃತ್ಯವಿದೆ. ಉಳಿದ ಎರಡು ಗಂಟೆಗಳ ಕಾಲ 'ರಾಜ್' ಚಿತ್ರಕಥೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಇದರಲ್ಲಿನ ಒಂದು ಹಾಡನ್ನು ಅದ್ನಾನ್ ಸಾಮಿ ಹಾಡಿದ್ದಾರೆ ಎಂದು ಪ್ರೇಮ್ ತಮ್ಮ 'ರಾಜ್' ಬಗ್ಗೆ ಹೇಳಿದರು.

  ಡಾ.ರಾಜ್‌ಕುಮಾರ್ ಹುಟ್ಟ್ಟುಹಬ್ಬದ ದಿನ ಏಪ್ರಿಲ್ 24ರಂದು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 'ರಾಜ್' ಚಿತ್ರ ಸೆಟ್ಟೇರಲಿದೆ. ಪ್ರೇಮ್ ಚಿತ್ರಗಳಲ್ಲಿರುವ ವಿಚಿತ್ರ ಕೇಶ ವಿನ್ಯಾಸ 'ರಾಜ್' ಚಿತ್ರದಲ್ಲೂ ಇರುತ್ತದೆ. 'ರಾಜ್' ಸೆಟ್ಟೇರುವ ದಿನ ಪುನೀತ್ ಹೊಸ ಕೇಶ ವಿನ್ಯಾಸದಲ್ಲಿ ಕಾಣಿಸಲಿದ್ದಾರೆ ಹಾಗೆಯೇ ಅವರ ಅಂದಿನ ವೇಷಭೂಷಣ ಪ್ರೇಕ್ಷಕರನ್ನು ಆಕರ್ಷಿಸಲಿದೆ. ಪುನೀತ್ ಆ ದಿನ ಹೀಗೂ ಹಾಡಬಹುದು ''ಮೈ ನೇಮ್ ಈಸ್ ರಾಜ್, ರಾಜ್ ರಾಜ್, ವಾಟೀಸ್ ಯುವರ್ ನೇಮ್ ಪ್ಲೀಸ್...'' ಎಂದು.

  (ದಟ್ಸ್‌ಕನ್ನಡ ಸಿನಿವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X