ಆಗಸ್ಟ್‌ನಲ್ಲಿ ರಜನಿಕಾಂತ್ ರಾಣಾ ಪುನರಾರಂಭ
ಸ್ಟೈಲ್ ಕಿಂಗ್ ರಜನಿಕಾಂತ್ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅವರ ಬಹುನಿರೀಕ್ಷಿತ 'ರಾಣಾ' ಚಿತ್ರೀಕರಣ ಸ್ಥಗಿತವಾಗಿದೆ. ಸದ್ಯಕ್ಕೆ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ರಜನಿ ಅವರು ಸಂಪೂರ್ಣ ಗುಣಮುಖರಾಗಿ ಮರಳಿದ ಬಳಿಕ 'ರಾಣಾ' ಚಿತ್ರೀಕರಣ ಮತ್ತೆ ಆರಂಭವಾಗಲಿದೆ. ಮೂಲಗಳ ಪ್ರಕಾರ ಆಗಸ್ಟ್ ತಿಂಗಳಲ್ಲೇ ರಾಣಾ ಚಿತ್ರೀಕರಣ ಭರದಿಂದ ಸಾಗಲಿದೆ ಎನ್ನುತ್ತವೆ ರಜನಿ ಆಪ್ತವಲಯ. ನ್ಯುಮೋನಿಯಾ, ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ರಜನಿಕಾಂತ್ ಬಳಲುತ್ತಿದ್ದರು.
ಏತನ್ಮಧ್ಯೆ ರಜನಿ ಅಭಿಮಾನಿಗಳು ಕಾಳಿಕಾಂಬ ಆಲಯದಲ್ಲಿ ವಿಶೇಷ ಪೂಜೆ ಮಾಡಿ ಪ್ರಸಾದನ್ನು ಸಿಂಗಪುರಕ್ಕೆ ಕಳುಹಿಸಿದ್ದಾರೆ. ದಿನ ಬೆಳಗಾದರೆ ಸಾಕು ಸಿಂಗಪುರದಲ್ಲಿ ರಜನಿ ಅವರ ಅಪಾರ ಅಭಿಮಾನಿಗಳು ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ಅವರಿಗೆಲ್ಲರನ್ನೂ ಸಂಭಾಳಿಸುವುದು ರಜನಿ ಕುಟುಂಬಿಕರಿಗೆ ದೊಡ್ಡ ತಲೆನೋವಾಗಿದೆಯಂತೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Rajini's health is improving a lot and he will be seen soon in action by August for 'Rana', says close sources of the superstar. Meanwhile Rajini e-fans arranged a special pooja at Kalikambal temple and sent the prasadam to Singapore where Rajini taking treatment or his illness.


Click it and Unblock the Notifications











