ರಂಗನಾಥ್ ಭಾರದ್ವಾಜ್ ಚೊಚ್ಚಲ ಚಿತ್ರ ನನ್ನ ಸೊಸೆ
ಸುವರ್ಣ24x7 ಸುದ್ದಿ ವಾಹಿನಿಯ ರಾಜಕೀಯ ವಿಭಾಗದ ಮುಖ್ಯಸ್ಥ ರಂಗನಾಥ್ ಭಾರದ್ವಾಜ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರ 'ನನ್ನ ಸೊಸೆ'. ಮ್ಯಾಥ್ಯು ರಾಜನ್ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಕೋದಂಡ ರಾಮ, ನಮ್ಮಣ್ಣ, ಧಿಮಾಕು, ಸಿಐಡಿ ಈಶ ಚಿತ್ರಗಳಲ್ಲಿ ಅಭಿನಯಿಸಿದ್ದಮಯೂರಿ ಅಲಿಯಾಸ್ ಫ್ಲೋರಾ ಶೈನಿ ಚಿತ್ರದ ನಾಯಕಿ. ಈ ಚಿತ್ರದಲ್ಲಿ ರಂಗನಾಥ್ ಅವರ ತಂದೆಯಾಗಿ ಅನಂತನಾಗ್ ಕಾಣಿಸಲಿದ್ದಾರೆ. ಅನಂತನಾಗ್ ಅವರ ಮಡದಿಯಾಗಿ ವಿನಯಾ ಪ್ರಕಾಶ್ ಅಭಿನಯಿಸಿದ್ದಾರೆ.
ಇದೊಂದು ಸಂಪೂರ್ಣ ಹಾಸ್ಯ ಪ್ರಧಾನ ಚಿತ್ರ. ಈ ಹಿಂದೆ 'ಚೆಲುವಿನ ಗೆಳತಿ' ಎಂಬ ಚಿತ್ರದಲ್ಲಿ ರಂಗನಾಥ್ ಭಾರದ್ವಾಜ್ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಈ ಬಗ್ಗೆ ಕನ್ನಡ ದಿನಪತ್ರಿಕೆಗಳಲ್ಲೂ ಜಾಹೀರಾತು ನೀಡಲಾಗಿತ್ತು. ಬಳಿಕ ಆ ಚಿತ್ರದ ಕತೆ ಏನಾಯಿತು ಎಂಬುದು ಸುದ್ದಿ ಇಲ್ಲ.
ರಂಗನಾಥ್ ಭಾರದ್ವಾಜ್ ಅನಂತನಾಗ್ ನನ್ನ ಸೊಸೆ ಆಶಾ ಶೈನಿ ಮಯೂರಿ ಸುವರ್ಣ ranganatha bharadwaj anant nag nanna sose suvarna news channel


Click it and Unblock the Notifications