ಗೋಲ್ಡನ್ ಸ್ಟಾರ್ ಗೆ ಕೈಕೊಟ್ಟ ಮುಂಬೈ ಬೆಡಗಿ!

By Rajendra

ಗೋಲ್ಡನ್ ಸ್ಟಾರ್ ಗಣೇಶ್ ಗೆ ಮುಂಬೈನ ಬೆಡಗಿ ಶೀನಾ ಶಹಬಾದಿ ಕೈಕೊಟ್ಟಿದ್ದಾರೆ. ಸದ್ಯಕ್ಕೆ ಬಹುತಾರಾಗಣದ 'ರಾಜಾಧಾನಿ'ಯಲ್ಲಿ ಬ್ಯುಸಿಯಾಗಿರುವ ಈ ನಟಿ ಗೋಲ್ಡನ್ ಸ್ಟಾರ್ ಗಣೇಶನ ಮುಂದಿನ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ. ಕಾರಣ ಕೇಳಿದರೆ, ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.

ಆದರೆ ಗೋಲ್ಡನ್ ಸ್ಟಾರ್ ಗಣೇಶ್ ಮಾತ್ರ ತಮ್ಮ ಮುಂದಿನ ಚಿತ್ರಕ್ಕೆ ನಾಯಕಿ ಈಕೆಯೇ ಆಗಬೇಕು ಎಂದು ಪಟ್ಟುಹಿಡಿದಿದ್ದಾರೆ. ಇದಕ್ಕಾಗಿ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ನಿರ್ಮಿಸಲಿರುವ ಹೊಸ ಚಿತ್ರದ ದಿನಾಂಕವನ್ನು ಗಣೇಶ್ ಮುಂದೂಡಿದ್ದಾರೆ ಎನ್ನುತ್ತವೆ ಮೂಲಗಳು.

ಎರಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸುವುದು ಅಷ್ಟು ಸಮಂಜಸವಲ್ಲ ಎಂಬುದು ಶೀನಾರ ವೈಯಕ್ತಿಕ ಅಭಿಪ್ರಾಯ. ಹಾಗಾಗಿ 'ರಾಜಧಾನಿ' ಓಕೆ ಗೋಲ್ಡನ್ ಸ್ಟಾರ್ ಯಾಕೆ?ಎನ್ನುತ್ತಿದ್ದಾರೆ ಶೀನಾ. ಅಂದಹಾಗೆ ರಾಜಧಾನಿಯಲ್ಲಿ ಯಶ್ ಮತ್ತು ಚೇತನ್ ಚಂದ್ರ ಮುಖ್ಯಭೂಮಿಕೆಯಲ್ಲಿದ್ದಾರೆ. ಯಶ್ ಗೆ ಜೋಡಿಯಾಗಿ ಶೀನಾ ಕಾಣಿಸಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X