»   » ಚೆಲುವೆಯೆ ನಿನ್ನ ನೋಡಲು ಚಿತ್ರದಲ್ಲಿ ಸೋನಾಲ್

ಚೆಲುವೆಯೆ ನಿನ್ನ ನೋಡಲು ಚಿತ್ರದಲ್ಲಿ ಸೋನಾಲ್

Subscribe to Filmibeat Kannada
Sonal Chouhan
ಮುಂಬೈ ನಿಂದ ಸೊನಾಲ್ ಚೌಹಾಣ್ ಎನ್ನುವ ಬೆಡಗಿಯನ್ನು ಕರೆತಂದಿದ್ದಾರೆ ನಿರ್ಮಾಪಕ ಎನ್.ಎಂ. ಸುರೇಶ್. ಶಿವರಾಜ್ ಕುಮಾರ್ ಅಭಿನಯದ 'ಚೆಲುವೆಯೇ ನಿನ್ನ ನೋಡಲು' ಚಿತ್ರಕ್ಕೆ ಈಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ರಘುರಾಮ್ ನಿರ್ದೇಶಿಸುತ್ತಿರುವ ಈ ಚಿತ್ರ ಡಿಸೆಂಬರ್ 10ರಂದು ಸೆಟ್ಟೇರಲಿದೆ.ವಿಶ್ವದ ಏಳು ಅಧ್ಬುತ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಕಳೆದ ಆರು ತಿಂಗಳಿಂದ ಚಿತ್ರೀಕರಣ ಆರಂಭವಾಗುತ್ತದೆ ಎಂದು ಹೇಳುತ್ತಲೇ ಬಂದಿದ್ದ ನಿರ್ಮಾಪಕರು ಈಗ ತಾರಾತುರಿಯಲ್ಲಿ ಮುಹೂರ್ತದ ದಿನವನ್ನು ಗೊತ್ತು ಪಡಿಸಿದ್ದಾರೆ.

ನಾಯಕಿ ಸೊನಾಲ್ ಚೌಹಾಣ್ ಹಿಂದಿಯಲ್ಲಿ ಹಿಮೇಶ್ ರಷ್ಮಿಯಾ ಜೊತೆ 'ಜನ್ನತ್' ಎನ್ನುವ ಫ್ಲಾಪ್ ಚಿತ್ರದಲ್ಲಿ ನಟಿಸಿದ್ದರು.ಈಕೆಯ ಬಾಯ್ ಫ್ರೆಂಡ್ ಸಾರ್ವಜನಿಕವಾಗಿ ಈಕೆಗೆ ಕಪಾಳಕ್ಕೆ ಹೊಡೆದು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದರು.ಬಾಲಿವುಡ್ ನ ಬಹಳಷ್ಟು ಗುಸುಗುಸು ಸುದ್ದಿಗಳಿಗೆ ಸೋನಾಲ್ ಚೌಹಾಣ್ ಆಹಾರವಾಗಿದ್ದಾರೆ. ಹಿಮೇಶ್ ರಶ್ಮಿಯಾ ಆಲ್ಬಂ ಆಪ್ ಕ ಸುರೂರ್ ನಲ್ಲೂ ಈಕೆ ಕಾಣಿಸಿಕೊಂಡಿದ್ದಾರೆ. ತೆಲುಗಿನ 'ರೈನ್ ಬೊ' ಎಂಬ ಚಿತ್ರದಲ್ಲೂ ಈಕೆ ನಟಿಸಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada